ಕೊಚ್ಚಿ: ಸಿನಿಮಾ ಶೂಟಿಂಗ್ ವೇಳೆ ನಟ ಪೃಥ್ವಿರಾಜ್ ಸುಕುಮಾರನ್ ಗಾಯಗೊಂಡಿದ್ದಾರೆ. ಮರಯೂರಿನಲ್ಲಿ ‘ವಿಲಾಯತ್ ಬುದ್ಧ’ ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ.
ಕಾಲಿಗೆ ಗಾಯಗಳಾಗಿರುವ ನಟನನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಳೆ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ವರದಿಯಾಗಿದೆ.
ಮರಯೂರು ಬಸ್ ನಿಲ್ದಾಣದಲ್ಲಿ ನಡೆದ ಸಂಘರ್ಷ ಸನ್ನಿವೇಶವೊಂದರ ಚಿತ್ರೀಕರಣದ ವೇಳೆ ಪೃಥ್ವಿರಾಜ್ ಕಾಲು ಜಾರಿ ಬಿದ್ದಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಅವಘಡ ಸಂಭವಿಸಿದೆ. ನಂತರ ಪ್ರಾಥಮಿಕ ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆಗೆ ಹಾಗೂ ಬಳಿಕ ತಜ್ಞ ಚಿಕಿತ್ಸೆಗಾಗಿ ಕೊಚ್ಚಿಗೆ ಕರೆದೊಯ್ಯಲಾಯಿತು.