ಕಾಸರಗೋಡು: ನೂತನ ಜಿಲ್ಲಾಧಿಕಾರಿ ಇಭಾಶೇಖರ್ ಅವರನ್ನು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇತ್ತೀಚೆಗೆ ಅವರ ಚೇಂಬರ್‍ನಲ್ಲಿ ಭೇಟಿಯಾಗಿ ಅಹವಾಲು ಸಲ್ಲಿಸಿದರು. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ಸಾಂವಿಧಾನಿಕವಾಗಿ ಸೂಚಿಸಿದ ಸವಲತ್ತುಗಳನ್ನು ನೀಡುವುದರ ಜತೆಗೆ ಅವರ ನ್ಯಾಯುತ ಬೇಡಿಕೆಗಳನ್ನು ಈಡೇರಿಸಿ ನ್ಯಾಯ ಒದಗಿಸಿ ಕೊಡಿಸುವಂತೆ ಮನವಿಂ ಮೂಲಕ ಕೇಳಿಕೊಳ್ಳಲಾಯಿತು.
ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಪದಾಧಿಕಾರಿಗಳಾದ ತೆಕ್ಕೆಕೆರೆ ಶಂಕರನಾರಾಯಣ ಭಟ್, ವಿ.ಬಿ.ಕುಳಮರ್ವ ಮತ್ತು ಗಣೇಶಪ್ರಸಾದ್ ಪಾಣೂರು ಜಿಲ್ಲಾಧಿಕಾರಿಯನ್ನು ಭೇಟಿಯಾದ ನಿಯೋಗದಲ್ಲಿದ್ದರು.
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರು ಹೆಜ್ಜೆಹೆಜ್ಜೆಗೂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಯೋಗ ಮನವರಿಕೆ ಮಾಡಿಕೊಡುವ ಮೂಲಕ ಸಮಗ್ರ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿ ಸಮಸ್ಯೆ ಅರ್ಥೈಸಿಕೊಂಡ ಜಿಲ್ಲಾಧಿಕಾರಿಗಳು ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತಾದ ಮತ್ತಷ್ಟು ವಿವರಗಳನ್ನು ನಿಯೋಗದಿಂದ ಕೇಳಿ ತಿಳಿದುಕೊಂಡರು. ಭಾಷಾ ಅಲ್ಪಸಂಖ್ಯಾತರ ಸಭೆಯನ್ನು ಶೀಘ್ರ ನಡೆಸಲು ದಿನಾಂಕ ನಿಗದಿಪಡಿಸುವುದಾಗಿ ಭರವಸೆ ನೀಡಿದರು.
ತಮಿಳು ಮಾತೃಭಾಷಿಗರಾದ ಜಿಲ್ಲಾಧಿಕಾರಿಗೆ ಅಲ್ಪ ಕನ್ನಡ ಭಾಷಾ ಜ್ಞಾನವೂ ಇರುವುದರಿಂದ ಕನ್ನಡಿಗರ ನ್ಯಾಯಯುತ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳು ಶೀಘ್ರವಾಗಿ ಈಡೇರಿಸುವ ಭರವಸೆಯಿರುವುದಾಗಿ ಗಮಕ ಕಲಾ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಯಣ ಭಟ್ ಮತ್ತು ವಿ.ಬಿ ಕುಳಮರ್ವ ಹೇಳಿಕೆಯಲ್ಲಿ ತಿಳಿಸಿದ್ದಾರೆ.