ಅಹಮದಾಬಾದ್ : ಜಗನ್ನಾಥ ದೇವರ 146ನೇ ರಥಯಾತ್ರೆಯ 18 ಕಿ.ಮೀ ಮೆರವಣಿಗೆಯು ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಸುಮಾರು 26 ಸಾವಿರ ಭದ್ರತಾ ಸಿಬ್ಬಂದಿಯ ಬಂದೋಬಸ್ತ್ ನಡುವೆ ಲಕ್ಷಾಂತರ ಭಕ್ತಾದಿಗಳು ಯಾತ್ರೆಯಲ್ಲಿ ಪಾಲ್ಗೊಂಡರು.
ಅಹಮದಾಬಾದ್ : ಜಗನ್ನಾಥ ದೇವರ 146ನೇ ರಥಯಾತ್ರೆಯ 18 ಕಿ.ಮೀ ಮೆರವಣಿಗೆಯು ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಸುಮಾರು 26 ಸಾವಿರ ಭದ್ರತಾ ಸಿಬ್ಬಂದಿಯ ಬಂದೋಬಸ್ತ್ ನಡುವೆ ಲಕ್ಷಾಂತರ ಭಕ್ತಾದಿಗಳು ಯಾತ್ರೆಯಲ್ಲಿ ಪಾಲ್ಗೊಂಡರು.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಬೆಳಿಗ್ಗೆ ಚಿನ್ನದ ಪೊರಕೆಯಿಂದ ರಥಗಳನ್ನು ಸ್ವಚ್ಛಗೊಳಿಸುವ 'ಪಹಿಂಡ್ ವಿದಿ' ಎಂಬ ಸಾಂಕೇತಿಕ ಆಚರಣೆ ಕೈಗೊಂಡರು. ನಂತರ, ಜಮಾಲ್‍ಪುರ್ ಪ್ರದೇಶದ 400 ವರ್ಷಗಳಷ್ಟು ಹಳೆಯ ದೇಗುಲದಿಂದ ಜಗನ್ನಾಥ ದೇವರ ಸಹೋದರ ಬಾಲಭದ್ರ ಮತ್ತು ಸಹೋದರಿ ಸುಭದ್ರಾ ವಿಗ್ರಹಗಳ ಯಾತ್ರೆ ಆರಂಭಿಸಲಾಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಮಂಗಳಾರತಿಯಲ್ಲಿ ಪಾಲ್ಗೊಂಡರು.
ಮೆರವಣಿಗೆಯನ್ನು ಬಿಗಿ ಭದ್ರತೆಯಲ್ಲಿ ನಡೆಸಲಾಗಿದ್ದು, ಆನೆ, ಒಂಟೆಯ ಗಾಡಿ ಹಾಗೂ ಭಕ್ತಿಪೂರ್ವಕ ಚಿತ್ರಗಳಿರುವ ಟ್ರಕ್‌ಗಳು ಮೆರವಣಿಗೆಯಲ್ಲಿ ಸಾಗಿದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಭಕ್ತಾದಿಗಳು ಭಜನೆಗಳನ್ನು ಹಾಡಿ, 'ಜೈ ಜಗನ್ನಾಥ' ಎಂದು ಘೋಷಣೆ ಕೂಗುತ್ತ ರಥಯಾತ್ರೆಯನ್ನು ಕಣ್ತುಂಬಿಕೊಂಡರು.
ಭದ್ರಾತಾ ವ್ಯವಸ್ಥೆ:
ರಥಯಾತ್ರೆಗೆ ಗುಜರಾತ್ ಪೊಲೀಸರು ಇದೇ ಮೊದಲ ಬಾರಿಗೆ 3ಡಿ ಮ್ಯಾಪಿಂಗ್ ತಂತ್ರಜ್ಞಾನವನ್ನು ಅಳವಡಿಸಿದ್ದು, ಇದರಲ್ಲಿ ಯಾವುದೇ ಅನಧಿಕೃತ ಡ್ರೋನ್ ಗಳನ್ನು ಬಳಸದಂತೆ ನೋಡಿಕೊಳ್ಳಲು ಡ್ರೋನ್ ವಿರೋಧಿ ತಂತ್ರಜ್ಞಾನವನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
18 ಕಿ.ಮೀ ಮೆರವಣಿಗೆಯುದ್ದಕ್ಕೂ ಒಟ್ಟು 26,091 ಭದ್ರತಾ ಸಿಬ್ಬಂದಿ, 2,322 ಬಾಡಿ ಕ್ಯಾಮರಾಗಳನ್ನು ಧರಿಸಿದ್ದ ಸಿಬ್ಬಂದಿ , 25 ವಾಹನಗಳಿಗೆ ಸಿಸಿಟಿವಿ ಕ್ಯಾಮರಾ ಮತ್ತು ಜಿಪಿಎಸ್ ವ್ಯವಸ್ಥೆ ಮಾಡಲಾಗಿದ್ದು 45 ಸೂಕ್ಷ್ಮ ಪ್ರದೇಶಗಳಲ್ಲಿ 94 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.