ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ಕ್ಷೇತ್ರದ ಪುನರ್ ನವೀಕರಣದ ಭಾಗವಾಗಿ ಇತ್ತೀಚೆಗೆ ಶ್ರೀದೇವರ ಬಾಲಾಲಯ ಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿದ್ದು, ಭಾನುವಾರ ಸ್ಥಳೀಯ ನೂರಾರು ಭಗವದ್ಬಕ್ತರ ನೇತೃತ್ವದಲ್ಲಿ ಶ್ರಮದಾನ ನಡೆಯಿತು.
ಅತ್ಯುತ್ಸಾಹದಲ್ಲಿ ಪಾಲ್ಗೊಂಡಿದ್ದ ಭಕ್ತರು ದೇವರ ಗರ್ಭಗೃಹ ಸಹಿತ ಪರಿಸರ ಪ್ರದೇಶದಲ್ಲಿ ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ನಡೆಸಿ ಮುಂದಿನ ಉಪಕ್ರಮಗಳಿಗೆ ವ್ಯವಸ್ಥೆಗೊಳಿಸಿದರು. ಜೀರ್ಣೋದ್ದಾರ ಸಮಿತಿ ಸಹಿತ ಕ್ಷೇತ್ರದ ಪ್ರಮುಖರು ನೇತೃತ್ವ ವಹಿಸಿದ್ದರು.