ಕಾಸರಗೋಡು: ಓದಿನಿಂದ ಮಾನವೀಯತೆ, ಕರುಣೆ ಜತೆಗೆ ಬೌದ್ಧಿಕ ವಿಕಾಸಕ್ಕೆ ಕಾರಣವಾಗುತ್ತದೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ.
ಅವರು ನಾಯಮರ್‍ಮೂಲೆ ಟಿಐಎಚ್‍ಎಸ್ ಶಾಲೆಯಲ್ಲಿ ನಡೆದ ವಾಚನಾ ಸಪ್ತಾಹದ ಜಿಲ್ಲಾಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಓದುಗನಿಗೆ ಒಬ್ಬ ಸ್ನೇಹಜೀವಿಯಾಗಿ ಪರಸ್ಪರ ಅರಿತು ಬದುಕಲು ಸಾಧ್ಯ. ಆನ್ ಲೈನ್ ಓದು ಪುಸ್ತಕ, ದಿನ ಪತ್ರಿಕೆಗಳ ಓದಿಗೆ ಎಂದಿಗೂ ಪೈಪೆÇೀಟಿ ನೀಡಲಾರದು. ಅಂಕ ಪಡೆದು ದೊಡ್ಡ ಹುದ್ದೆಗಳಿಗೆ ಬಂದರೂ ಮಾನವೀಯತೆ ಕಳೆದುಕೊಳ್ಳದೆ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಎಡಿಎಂಕೆ ನವೀನ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಖ್ಯಾತ ಶಿಲ್ಪಿ, ಕನಾಯಿ ಕುಞÂರಾಮನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಉತ್ತಮ ಪುಸ್ತಕಗಳನ್ನು ಓದುವುದರಿಂದ ಸನ್ಮಾರ್ಗದತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಮಕ್ಕಳ ಮನಸ್ಸಿನಲ್ಲಿರುವ ಬಾಲಿಶತೆ, ಸರಳತೆ ವ್ಯರ್ಥವಾಗದಿರಲು ಓದು ಸಹಕಾರಿ ಎಂದು ತಿಳಿಸಿದರು.
ಸಹಾಯಕ ಜಿಲ್ಲಾಧಿಕಾರಿ ಡಾ.ಮಿಥುನ್ ಪ್ರೇಮರಾಜ್ ವಾಚನ ದಿನಾಚರಣೆ ಪ್ರತಿಜ್ಞಾ ವಿಧಿವಾಚಿಸಿದರು. ಚೆಂಗಳ ಪಂಚಾಯತ್ ಅಧ್ಯಕ್ಷ ಖಾದರ್ ಬದರಿಯಾ ವಾಚನ ದಿನಾಚರಣೆ ಸಂದೇಶ ನೀಡಿದರು. ಕಾಸರಗೋಡು ಪಿ.ಎನ್.ಪಣಿಕರ್ ಫೌಂಡೇಶನ್ ಜಿಲ್ಲಾಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಅವರು ಪಿ.ಎನ್.ಪಣಿಕ್ಕರ್ ಸ್ಮಾರಕ ಉಪನ್ಯಾಸ ನೀಡಿದರು. ವಾಚನ ವಾರಾಚರಣೆ ಅಂಗವಾಗಿ ತನ್ಬಿಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರಂಗಂ ಕಲಾ ಸಾಹಿತ್ಯ ವೇದಿಕೆ ಹಾಗೂ ಮಲಯಾಳ ವಿಭಾಗದ ವತಿಯಿಂದ ಪುಸ್ತಕ ಪ್ರದರ್ಶನ ನಡೆಯಿತು. ಕಾನಾಯಿ ಕುಞÂರಾಮನ್ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.
ವಾರ್ಡ್ ಸದಸ್ಯೆ ಪಿ.ಖದೀಜಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಸುರೇಂದ್ರನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್, ಜಿಲ್ಲಾ ಯುವ ಕಾರ್ಯಕ್ರಮ ಅಧಿಕಾರಿ ಪಿ.ಸಿ.ಶಿಲಾಸ್, ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಮುಖ್ಯೋಪಾಧ್ಯಾಯ ಪಿ.ನಾರಾಯಣನ್ ಮುಂತಾದವರು ಉಪಸ್ಥಿತರಿದ್ದರು.