HEALTH TIPS

ಮಂಗಳೂರು ವಿವಿಯಲ್ಲಿ ಕಸಾಪ ದತ್ತಿ ಉಪನ್ಯಾಸ: ಸೇಡಿಯಾಪು ಅವರ ಸಾಹಿತ್ಯ,ಬದುಕು ನಮಗೆ ದಾರಿದೀಪ: ಡಾ.ಯು ಮಹೇಶ್ವರಿ


                      ಮಂಗಳೂರು:  ಸೇಡಿಯಾಪು ಅವರು ಗಾಂಧೀವಾಧಿಯಾಗಿ ಜೀವನದುದ್ದಕ್ಕೂ ಅವರು ನಡೆದು ಬಂದ ಹಾದಿ ವಿಶೇಷವಾದುದು. ದೇಶೀಯತೆಗೆ ಒತ್ತುಕೊಟ್ಟು  ಕನ್ನಡ  ಸಾಹಿತ್ಯ ಕ್ಷೇತ್ರದಲ್ಲಿ ಅವರ ಚಿಂತನೆ, ಒಲವು, ಪ್ರಯೋಗಶೀಲತೆ ನಮಗೆಲ್ಲರಿಗೂ ದಾರಿದೀಪವಾಗಿದೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ  ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಡಾ.ಯು ಮಹೇಶ್ವರಿ ಅವರು ಹೇಳಿದರು.

                  ಅವರು ಬುಧವಾರ ಮಂಗಳೂರು ವಿವಿಯ ಯು.ಆರ್ ರಾವ್ ಸಭಾಂಗಣದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಲಪಾಡಿ ವ್ಯಾಸ ಬಲ್ಲಾಳ ಜಾನಕಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಬದುಕು ಮತ್ತು ಸಾಹಿತ್ಯದ ಕುರಿತು ಅವರು ಮಾತನಾಡಿದರು.

             ಗಡಿಪ್ರದೇಶದಲ್ಲಿ ಕನ್ನಡದ ಚಟುವಟಿಕೆಗಳಿಗೆ ಸಕ್ರಿಯತೆಯನ್ನು ಒದಗಿಸಿದ ಗೋವಿಂದ ಪೈ , ಮುಳಿಯ  ತಿಮ್ಮಪ್ಪಯ್ಯರ  ಬಳಿಕ ಸೇಡಿಯಾಪು ಅವರು ಮುಂದುವರಿಸಿ, ಈ ಪ್ರದೇಶಕ್ಕೆ ಹಿರಿಮೆಯ ಘನತೆಯನ್ನು ಹೆಚ್ಚಿಸಿದವರಾಗಿದ್ದಾರೆ. ಅವರು ದೃಷ್ಟಿಯನ್ನು ಬೇಗ ಕಳೆದುಕೊಂಡರೂ ತಮ್ಮ ಅಗಾಧ ನೆನಪಿನ, ಜ್ಞಾನದ  ಶಕ್ತಿಯಿಂದ ಅನೇಕ ಕೃತಿಗಳನ್ನು ಹೊರತಂದಿರುವುದು ಅವರ ವಿದ್ವತ್ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.
                   ಅವರು ಬರೆದಿರುವ ಕತೆ, ಕವಿತೆ ಕಡಿಮೆಯೆನಿಸಿದರೂ ಅವರ ಚಿಂತನೆಗಳು  ತಳಸ್ಪರ್ಶಿಯಾಗಿತ್ತು. ಅವರ ಬರಹಗಳು ಊಹಾಪೋಹಗಳಿಗೆ ಸೀಮಿತವಾಗಿರದೆ ಆಧಾರಸಹಿತವಾಗಿತ್ತು. ಸೇಡಿಯಾಪು ಅವರು  ಸೃಜಶೀಲತೆ ಮತ್ತು ಪಾಂಡಿತ್ಯ ಸಂಗಮಿಸಿದ ವ್ಯಕ್ತಿಯಾಗಿದ್ದರು.ಭಾಷೆ, ಸಾಹಿತ್ಯದ ಪುನರುತ್ಥಾನಕ್ಕೆ ಇಂತವರ ನೆನಪನ್ನು  ಶಾಶ್ವತವಾಗಿಸುವ ಕೆಲಸ ನಮ್ಮಿಂದಾಗಬೇಕಿದೆ ಎಂದರು.
                  ಗಾಯಕಿ ಶ್ರೀದೇವಿ ಕಲ್ಲಡ್ಕ ಸೇಡಿಯಾಪು ಕವಿತೆಗಳನ್ನು ಹಾಡಿದರು.  ಮಂಗಳೂರು ವಿವಿ ಕನ್ನಡ ವಿಭಾಗದ ಅಧ್ಯಕ್ಷ ಡಾ.ಸೋಮಣ್ಣ ಹೊಂಗಳ್ಳಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸೇಡಿಯಾಪು ಅವರ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಯದಿರುವುದು ವಿಷಾದನೀಯ. ಸೇಡಿಯಾಪು ಅವರು ಸ್ವಾತಂತ್ರ್ಯದ ಕಾಲಘಟ್ಟದ ಹೋರಾಟದ ಸಂದರ್ಭದಲ್ಲಿ  ಕನ್ನಡಕ್ಕಾಗಿ ಹೋರಾಡಿದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ  ಅನೇಕ ಕೊಡುಗೆ ನೀಡಿದ ಇವರ ಬಗ್ಗೆ  ಹೆಚ್ಚೆಚ್ಚು ಅಧ್ಯಯನಗಳು ನಡೆಯಬೇಕಿದೆ ಎಂದರು.
                       ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ವಂದಿಸಿದರು.  ಉಳ್ಳಾಲ ಕಸಾಪ ಹೋಬಳಿ ಅಧ್ಯಕ್ಷರಾದ ವಿಜಯಲಕ್ಷ್ಮಿ ರೈ ಕಲ್ಲಿಮಾರ್, ಕಸಾಪ ಪದಾಧಿಕಾರಿಗಳಾದ ರಾಧಾಕೃಷ್ಣ ರಾವ್, ತ್ಯಾಗಂ ಹರೇಕಳ,ಅಮರ್ ಪೂಪಾಡಿಕಲ್ಲ್, ಕನ್ನಡ ವಿಭಾಗದ ಡಾ.ಯಶುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries