ಕಾಸರಗೋಡು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಹಾಗೂ ಚೆಂಗಳ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಸಿವಿಲ್ ಸ್ಟೇಷನ್ ವಠಾರದಲ್ಲಿ ಹಸಿರಿನ ಹೊದಿಕೆ ಅಳವಡಿಸುವ ಕಾರ್ಯಕ್ರಮದ ಅಂಗವಾಗಿ ಬಿದಿರಿನ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಯಿತು.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಬಿದಿರ ಸಸಿ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಬಡತನ ನಿರ್ಮೂಲನೆ ಇಲಾಖೆ ಯೋಜನಾ ನಿರ್ದೇಶಕ ಕೆ.ಅಬ್ದುಲ್ ಜಲೀಲ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್, ಚೆಂಗಳ ಗ್ರಾಮ ಪಂಚಾಯಿತಿ ಸಹಾಯಕ ಎಂಜಿನಿಯರ್ ಕೆ.ಎಂ.ಶಹಬಾಜ್ ಅಲಿ, ಅಬ್ದುಲ್ ಕಲಾಂ, ಅರಣ್ಯಾಧಿಕಾರಿ ಎನ್. ವಿ.ಸತ್ಯನ್ ಮತ್ತು ಇತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ವಿವಿಧ ಪ್ರಬೇದಗಳ ಸಸಿಗಳೊಂದಿಗೆ ಔಷಧೀಯ ಸಸ್ಯಗಳನ್ನು ನೆಡಲಗಿದ್ದು, ಇದರೊಂದಿಗೆ ಬಿದಿರ ಮೆಳೆ ಯೋಜನೆಯನ್ವಯ ಬಿದಿರಿನ ಸಸಿಗಳನ್ನು ನೆಡಲಾಗಿದೆ.