ನವದೆಹಲಿ: ಒಂದು ದೇಶ ದೊಡ್ಡ ಜನಸಂಖ್ಯೆ ಹೊಂದಿದೆ ಎಂದಾಕ್ಷಣ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಅನಿಲಗಳನ್ನು ಹೆಚ್ಚಾಗಿ ಹೊರಸೂಸುತ್ತಿವೆ ಎಂದರ್ಥವಲ್ಲ. ಈ ತಪ್ಪುಕಲ್ಪನೆಯನ್ನು ಹೋಗಲಾಡಿಸುವ ಅಗತ್ಯ ಇದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ)ಯ ಅಧಿಕಾರಿ ಹೇಳಿದ್ದಾರೆ.

'ಜನಸಂಖ್ಯೆಗೂ, ಹೊರಸೂಸುವಿಕೆ ಪ್ರಮಾಣಕ್ಕೂ ಸಂಬಂಧ ಇಲ್ಲ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕಡಿಮೆ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತವೆ. ಆದರೆ, ಈ ರಾಷ್ಟ್ರಗಳೇ ಹವಾಮಾನ ಬದಲಾವಣೆಯಿಂದಾಗುವ ಕೆಟ್ಟ ಪರಿಣಾಮಗಳನ್ನು ಹೆಚ್ಚು ಅನುಭವಿಸುತ್ತಿವೆ' ಎಂದು ಯುಎನ್‌ಎಫ್‌ಪಿಎ ನಿರ್ದೇಶಕಿ (ತಾಂತ್ರಿಕ ವಿಭಾಗ) ಡಾ.ಜೂಲಿಟ್ಟಾ ಒನಬಾಂಜೊ ಹೇಳಿದ್ದಾರೆ.
'ಭಾರತ ಅಧಿಕ ಜನಸಂಖ್ಯೆ ಹೊಂದಿದ ದೇಶವಾಗಿರುವ ಕಾರಣ, ಹಸಿರುಮನೆ ಅನಿಲಗಳನ್ನು ಅಧಿಕ ಪ್ರಮಾಣದಲ್ಲಿ ಹೊರಸೂಸುತ್ತದೆ ಎಂಬ ಅಭಿಪ್ರಾಯವನ್ನು ಹೋಗಲಾಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ' ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.