ಲಂಡನ್: ವಿಶ್ವದ ಅತ್ಯುನ್ನತ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿ 'ಟೈಮ್ಸ್ ಹೈಯರ್ ಎಜುಕೇಷನ್ (ಟಿಎಚ್‌ಇ) ಇಂಪ್ಯಾಕ್ಟ್ ರ‍್ಯಾಂಕಿಂಗ್ಸ್ 2023' ಗುರುವಾರ ಬಿಡುಗಡೆಯಾಗಿದ್ದು, ತಮಿಳುನಾಡಿನ ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠ ಜಾಗತಿಕ ಮಟ್ಟದಲ್ಲಿ 52ನೇ ರ‍್ಯಾಂಕ್ ಪಡೆದಿದೆ.

ಈ ಮೂಲಕ ಈ ವಿಶ್ವವಿದ್ಯಾಲಯವು ಭಾರತದ ಅತ್ಯುನ್ನತ ಶ್ರೇಣಿಯ ವಿಶ್ವವಿದ್ಯಾಲಯ ಎನಿಸಿಕೊಂಡಿದೆ.
ಆಸ್ಟ್ರೇಲಿಯಾದ ವೆಸ್ಟ್ರನ್ ಸಿಡ್ನಿ ವಿ.ವಿ, ಬ್ರಿಟನ್‌ನ ಯುನಿವರ್ಸಿಟಿ ಆಫ್ ಮ್ಯಾಂಚೆಸ್ಟರ್, ಕೆನಡಾದ ಕ್ವೀನ್ಸ್ ಯುನಿವರ್ಸಿಟಿಗಳು ಅತ್ಯುನ್ನತ ರ‍್ಯಾಂಕ್ ಪಡೆದಿವೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ತಲುಪುವ ನಿಟ್ಟಿನಲ್ಲಿ ಈ ವಿಶ್ವವಿದ್ಯಾಲಯಗಳು ಗಮನಾರ್ಹ ಸಾಧನೆ ಮಾಡಿವೆ ಎನ್ನಲಾಗಿದೆ.
ಜಗತ್ತಿನ 300 ಅತ್ಯುನ್ನತ ವಿ.ವಿಗಳಲ್ಲಿ ಭಾರತದ ಹಲವು ವಿ.ವಿಗಳು ಸ್ಥಾನ ಪಡೆದಿವೆ. ಪಂಜಾಬ್‌ನ ಲವ್ಲಿ ಪ್ರೊಪೆಷನಲ್ ವಿ.ವಿ ಹಿಮಾಚಲ ಪ್ರದೇಶದ ಶೂಲಿನಿ ಯುನಿವರ್ಸಿಟಿ ಆಫ್ ಬಯೋಟೆಕ್ನಾಲಜಿ ಆಯಂಡ್ ಮ್ಯಾನೇಜ್‌ಮೆಂಟ್ ಸೈನ್ಸಸ್ 101ರಿಂದ 200 ಒಳಗಿನ ರ‍್ಯಾಂಕ್‌ಗಳನ್ನು ಪಡೆದಿವೆ. ಒಡಿಶಾದ ಕೆಐಐಟಿ ವಿ.ವಿಯು 201ರಿಂದ 300ರ ಒಳಗಿನ ರ‍್ಯಾಂಕ್ ಪಟ್ಟಿಯಲ್ಲಿದೆ.
'ಭಾರತದ ವಿ.ವಿಗಳ ಸಾಧನೆ ನೋಡಲು ಸಂತೋಷವಾಗುತ್ತಿದೆ. ವಿಶ್ವದ ಅತ್ಯುತ್ತಮ 100 ವಿ.ವಿಗಳಲ್ಲಿ 52ನೇ ಸ್ಥಾನವನ್ನು ಭಾರತದ ವಿ.ವಿ ಪಡೆದಿರುವುದು ಮತ್ತು 17 ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ 10 ಗುರಿಗಳನ್ನು ತಲುಪಿರುವ ಪ್ರಮುಖ 100 ವಿ.ವಿಗಳಲ್ಲಿ ಸ್ಥಾನ ಪಡೆದಿರುವುದು ನೋಡಿದರೆ, ಭಾರತದ ವಿ.ವಿಗಳು ಪ್ರಮುಖ ಗುರಿಗಳನ್ನು ಎಷ್ಟು ಗಂಭೀರವಾಗಿ ಪರಿಗಣಿಸಿವೆ ಎಂಬುದು ಗೊತ್ತಾಗುತ್ತದೆ ಎಂದು ಟಿಎಚ್‌ಇಯ ಉನ್ನತ ಅಧಿಕಾರಿ ಫಿಲ್ ಬಾಟಿ ಶ್ಲಾಘಿಸಿದ್ದಾರೆ.