ಬದಿಯಡ್ಕ: ಕೇರಳ ರಾಜ್ಯದಾದ್ಯಂತ ಕೇರಳ ಸರ್ಕಾರದ ಅಧ್ಯಾಪಕ ದ್ರೋಹ ನೀತಿಗೆದುರಾಗಿ ಬೇಸಿಗೆ ರಜೆಯನ್ನು ಕಡಿತಗೊಳಿಸುವುದು, ಹೆಚ್ಚಿನ ಶನಿವಾರಗಳನ್ನು ವೃತ್ತಿ ದಿನವಾಗಿ ಮಾಡುವ ನೀತಿಗೆ ಎದುರಾಗಿ ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ ಬದಿಯಡ್ಕ ಪೇಟೆಯಲ್ಲಿ ಸಂಜೆ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ಜರಗಿತು. ಪ್ರತಿಭಟನಾ ಸಭೆಯನ್ನು ಕೆ.ಪಿ.ಎಸ್.ಟಿ.ಎ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಕಾನತ್ತೂರ್ ಉದ್ಘಾಟಿಸಿ ಮಾತನಾಡಿ À ಸರ್ಕಾರ ಅಧ್ಯಾಪಕ ವಿರೋಧಿ ನೀತಿಯನ್ನು ಅನುಸರಿಸಿ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲುಗೊಳಿಸುತ್ತಿದೆ. ಆಡಳಿತ ಪಕ್ಷದ ಅಧ್ಯಾಪಕ ಸಂಘಟನೆ ಮತ್ತು ಉಳಿದ ಸಂಘಟನೆಗಳು ಯಾವುದೇ ಪ್ರತಿಕ್ರಿಯೆ ನೀಡದೆ ಇರುದು ಖೇದಕರವಾಗಿದೆ ಎಂದು ಅಭಿಪ್ರಾಯಪಟ್ಟರು. ಉಪಜಿಲ್ಲಾ ಅಧ್ಯಕ್ಷ ಯಾಕೂಬ್ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಗೋಪಾಲ ಮಾಸ್ತರ್, ಕೆಪಿಎಸ್‍ಟಿಎ ರಾಜ್ಯ ಉಪ ಸಮಿತಿ ಸಂಚಾಲಕÀ ಯೂಸುಫ್ ಕೆ., ನಿರಂಜನ ರೈ ಪೆರಡಾಲ, ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಕಾರ್ಯದರ್ಶಿ ಜಲಜಾಕ್ಷಿ ಟೀಚರ್, ಕೋಶಾಧಿಕಾರಿ ರಾಧಾಕೃಷ್ಣನ್ ಮಾತನಾಡಿದರು. ಕಾರ್ಯದರ್ಶಿ ಶರತ್ ಚಂದ್ರ ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ರಾಮಕೃಷ್ಣನ್ ವಂದಿಸಿದರು. ಸಮಿತಿ ಸದಸ್ಯರು ಧರಣಿಗೆ ನೇತೃತ್ವ ನೀಡಿದರು.