ಮುಳ್ಳೇರಿಯ: ನಮ್ಮ ದೇಹವೇ ದೊಡ್ಡ ಸಂಪತ್ತು. ಅದನ್ನು ಸಂರಕ್ಷಿಸಬೇಕು. ದೇವರ ಹೆಸರಲ್ಲಿ ದಾನಮಾಡಬೇಕು. ಬಡವರ ಹಸಿವನ್ನು ನೀಗಿಸಬೇಕು. ಪೆರುಂಕಳಿಯಾಟದ ಮೂಲಕ ಎಲ್ಲ ಸಮೂದಾಯದವರ ಒಗ್ಗಟ್ಟು ಸಾಧ್ಯ. ನಮ್ಮ ಆಂತರ್ಯ ಶುದ್ಧವಾಗಿ ದ್ವೇಷ ದೂರವಾಗಬೇಕು. ದೇಶ ಸುಭಿಕ್ಷವಾಗಬೇಕು. ಎಂದು ಕೊಂಡೆಯೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ 2025 ಜ.19ರಿಂದ 24ರ ತನಕ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಮತ್ತು ಧನ ಸಂಗ್ರಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಪೆರುಂಕಳಿಯಾಟ ಮಹೋತ್ಸವ ಸಮಿತಿ ಅಧ್ಯಕ್ಷ ಬಿಪಿನ್ ದಾಸ್ ರೈ ಆದೂರುಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಕಾರಡ್ಕ ಬ್ಲಾಕ್ ಪಂ. ಅಧ್ಯಕ್ಷ ಸಿಜಿ ಮೇಥ್ಯು, ಕಾರಡ್ಕ ಗ್ರಾಮ ಪಂ. ಅಧ್ಯಕ್ಷ ಕೆ.ಗೋಪಾಲಕೃಷ್ಣ, ಉಪಾಧ್ಯಕ್ಷೆ ಜನನಿ.ಎಂ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ನಾಸರ್, ಉದ್ಯಮಿ ವಸಂತ ಪೈ ಬದಿಯಡ್ಕ, ಅನಂತಕೃಷ್ಣ ಚಡಗ ಮಿತ್ತಬೂಡು, ಕೃಷ್ಣ ಮಣಿಯಾಣಿ ಕಳತ್ತಿಲೆವೀಡ್, ಬಾಲಕೃಷ್ಣ ಚಳ್ಳಂಗೋಡು, ಸದಾಶಿವ ಮಣಿಯಾಣಿ ಕಾನಕ್ಕೋಡು, ಮಲ್ಲಾವರ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್, ಮಾತೃ ಸಮಿತಿ ಕಾರ್ಯದರ್ಶಿ ಗೀತಾದಾಮೋದರನ್, ಮುಳ್ಳೇರಿಯ ಚರ್ಚ್ ಮುಖ್ಯಸ್ಥ ಫಾದರ್ ಮ್ಯಾಥ್ಯು ಕುಡಿಲಿಲ್, ಆದೂರು ಜಮಾಅತ್ತ್‍ನ ಮೊಹಮ್ಮದ್ ಪಟ್ಟಾಂಗ್, ಕಾನತ್ತೂರು ನಾಲ್ವರ್ ದೈವಸ್ಥಾನದ ಮೆನೇಜಿಂಗ್ ಟ್ರಸ್ಟಿ ಕೆ.ಪಿ.ಮಾಧವನ್ ನಾಯರ್, ಭಗವತೀ ಕ್ಷೇತ್ರದ ಅಧ್ಯಕ್ಷ ದಾಮೋದರನ್ ಕಾವುಗೋಳಿ, ಮುಕಯಬೋವಿ ಸಮುದಾಯ ಸಭೆಯ ಅಧ್ಯಕ್ಷ ಆನಂದ ಕೊಟ್ಲು, ಮುಕಯ ಬೋವಿ ಮಹಿಳಾ ಸಭೆಯ ಅಧ್ಯಕ್ಷೆ ಶಾಲಿನಿ ಕೃಷ್ಣಪ್ಪ, ಮೋರಾಯಿ ಗುತ್ಯಮ್ಮ ಕ್ಷೇತ್ರದ ಅಧ್ಯಕ್ಷ ನಾರಾಯಣ.ಕೆ.ಕಾವುಗೋಳಿ, ಕಾರ್ಲೆ ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರದ ಕಾರ್ಯದರ್ಶಿ ಉಮೇಶ್.ಎನ್, ಪದಿಕಾಲಡ್ಕ ಕ್ಷೇತ್ರ ಸಮಿತಿ ಅಧ್ಯಕ್ಷ ಹರಿಣಾಕ್ಷನ್ ಜೋಗಿಮೂಲೆ, ಕಾಸರಗೋಡು ಶ್ರೀ ವೆಂಕಟ್ರಮಣ ಕ್ಷೇತ್ರ ಸಮಿತಿ ಅಧ್ಯಕ್ಷ ವೆಂಕಟ್ರಮಣ ಹೊಳ್ಳ, ಮುಂಡೋಳು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಟ್ರಸ್ಟಿ ರಘುರಾಮ ಬಲ್ಲಾಳ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿ ತರಗತಿಯಲ್ಲಿ ಅತ್ಯುನ್ನತ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಐಶ್ವರ್ಯ ಇವರನ್ನು ಅಭಿನಂದಿಸಲಾಯಿತು.
ಭಗವತೀ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮಾಧವನ್ ಭಂಡಾರಮನೆ ಸ್ವಾಗತಿಸಿ, ಪೆರುಂಕಳಿಯಾಟ ಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಹರಿಶ್ಚಂದ್ರ.ಆರ್.ಬೇರಿಕೆ ವಂದಿಸಿದರು. ರವೀಂದ್ರ ರೈ ಮಲ್ಲಾವರ ಕಾರ್ಯಕ್ರಮ ನಿರೂಪಿಸಿದರು.