ನವದೆಹಲಿ: ದೆಹಲಿ ಅಬಕಾರಿ ನೀತಿ ಜಾರಿ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಜೈಲಿನಲ್ಲಿರುವ ಆಪ್ ನಾಯಕ ಹಾಗೂ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಮ್ಮ ಪತ್ನಿ ಸೀಮಾ ಸಿಸೋಡಿಯಾ ಅವರನ್ನು ಭೇಟಿಯಾಗಲೆಂದು ಶನಿವಾರ ಜೈಲಿನಿಂದ ನಿವಾಸಕ್ಕೆ ಬಂದರು.

ಸೀಮಾ ಸಿಸೋಡಿಯಾ ಅವರು ಮೆದುಳು ಮತ್ತು ಬೆನ್ನು ಹುರಿಗೆ ಸಂಬಂಧಿಸಿದ 'ಮಲ್ಟಿಪಲ್ ಸ್ಕ್ಲೆರೋಸಿಸ್' ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಶನಿವಾರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಸೀಮಾ ಸಿಸೋಡಿಯಾ ಅವರನ್ನು ಭೇಟಿಯಾಗಲು ದೆಹಲಿ ಹೈಕೋರ್ಟ್ ಸಿಸೋಡಿಯಾ ಅವರಿಗೆ ಶುಕ್ರವಾರ ಅನುಮತಿ ನೀಡಿತ್ತು.
ಈ ಅವಧಿಯಲ್ಲಿ ಸಿಸೋಡಿಯಾ ಮಾಧ್ಯಮಗಳೊಂದಿಗೆ ಸಂವಹನ ನಡೆಸುವಂತಿಲ್ಲ ಎಂದು ಷರತ್ತನ್ನೂ ವಿಧಿಸಲಾಗಿದೆ.