ಕಾಸರಗೋಡು: ನೀಲೇಶ್ವರ ನಗರಸಭಾ ಮನ್ನನ್‍ಪುರತ್ತ್ ಬನದಲ್ಲಿ ನಡೆಯಲಿರುವ ಕಲಶೋತ್ಸವದ ಸಂದರ್ಭ ಸ್ವಚ್ಛತೆಗಾಗಿ ತೆಂಗಿನ ಗರಿಯಿಂದ ತಯಾರಿಸಿದ ಬುಟ್ಟಿಗಳನ್ನು ವಿತರಿಸಲಾಯಿತು. ನೀಲೇಶ್ವರ ನಗರಸಭಾ ವತಿಯಿಂದ ಬುಟ್ಟಿಗಳನ್ನು ನೀಡಲಾಗಿದ್ದು, ನಗರಸಭಾ ಅಧ್ಯಕ್ಷ ಟಿ.ವಿ ಅವರು ದೇವಸ್ವಂ ಪದಾಧಿಕಾರಿಗಳಿಗೆ ಬುಟ್ಟಿಗಳನ್ನು ವಿತರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ರವೀಂದ್ರನ್, ಪಿ.ಸುಭಾಸ್, ಟಿ.ಪಿ ಲತಾ, ನಗರಸಭಾ ಸದಸ್ಯರಾದ ಕೆ. ಭಾರ್ಗವಿ, ಟಿ.ವಿ. ಶೀಬಾ, ಕೆ.ಜಯಶ್ರೀ, ನಗರಸಭೆ ಕಾರ್ಯದರ್ಶಿ ಕೆ.ಮನೋಜ್ ಕುಮಾರ್, ಆರೋಗ್ಯ ನಿರೀಕ್ಷಕರಾದ ಪಿ.ಪಿ. ಸಮಿತಾ, ರಚನಾ ಉಪಸ್ಥಿತರಿದ್ದರು. ಭೂತಾರಾಧನೆಯ ಕೊನೆಯ ಉತ್ಸವವಾಗಿ ನೀಲೇಶ್ವರದ ಮನ್ನಾರ್‍ಕಾವು ಬನದಲ್ಲಿ ಕಲಶೋತ್ಸವ ಆಚರಿಸಲಾಗುತ್ತಿದೆ. ಇದು ಜಿಲ್ಲೆಯ ತೆಯ್ಯಕಾಲಂ ಅಂತ್ಯವನ್ನು ಸೂಚಿಸುತ್ತದೆ. ನಗರಸಭೆಯ ಹಸಿರು ಕ್ರಿಯಾ ಸೇನೆಯು ಕಳಶ ಮಾರುಕಟ್ಟೆಗೆ ಸಂಬಂಧಿಸಿದಂತೆ ಹೊರಬೀಳುವ ಅಜೈವಿಕ ತ್ಯಾಜ್ಯವನ್ನು ಪ್ರತಿನಿತ್ಯ ಬಳಕೆದಾರರ ಶುಲ್ಕ ವಿಧಿಸಿ ಸಂಗ್ರಹಿಸಲಿದ್ದು, ಉತ್ಸವ ಆಚರಣೆ ವೇಳೆ ಗ್ರೀನ್ ಪೆÇ್ರೀಟೋಕಾಲ್ ಪಾಲಿಸುವಂತೆ ಸೂಚನೆ ನೀಡಲಾಗಿದೆ.