ಬದಿಯಡ್ಕ: ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಜುಲೈ 3 ರಿಂದ ಸೆಪ್ಟಂಬರ್ 29 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಕಾರ್ಯಕ್ರವನ್ನು ಯಶಸ್ವಿಗೋಳಿಸಲು ಎಡನೀರಿನಲ್ಲಿ ಜರಗಿದ ನಿರ್ವಹಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಶ್ರೀ ಮಠದ ಭಕ್ತರು, ಈಗಾಗಲೇ ವಿವಿಧ ಪ್ರದೇಶದಲ್ಲಿ ಪ್ರಾದೇಶಿಕ ಸಮಿತಿಗಳನ್ನು ರಚಿಸಿ ಕಾರ್ಯಕ್ರಮದ ಯಶಸ್ವಿಗಾಗಿ ದುಡಿಯುತ್ತಿದ್ದಾರೆ. ಅಧಿಕ ಮಾಸದಲ್ಲಿ ಜರಗುವ ವ್ರತಾಚರಣೆಯಲ್ಲಿ, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಮಾಧವ ಹೇರಳ ಕೆ. ಅಧ್ಯಕ್ಷತೆ ವಹಿಸಿದ್ದರು. ಕೆ.ವಿ. ಬಾಲಕೃಷ್ಣ, ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಮಹೇಶ್ ವಳಕುಂಜ, ಸತ್ಯನಾರಾಯಣ ತಂತ್ರಿ, ಕೆ. ಕಮಲಾಕ್ಷ ಕಲ್ಲುಗದ್ದೆ, ಭವಾನಿ ಶಂಕರ, ಗಣೇಶ್ ಭಟ್ ಅಳಕ್ಕೆ ಮೊದಲಾದವರು ಮಾತನಾಡಿದರು. ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರ್ಯ ಭಟ್ ಎಡನೀರು ಸ್ವಾಗತಿಸಿ, ಕೆ.ಗೋವಿಂದ ಭಟ್ ವಂದಿಸಿದರು. ಕಾರ್ಯಕ್ರಮದ ಯಶಸ್ವಿಗೆ ಎಡನೀರು ಪ್ರದೇಶದ ಎಲ್ಲಾ ಭಕ್ತರ ಸಭೆ ಇಂದು(ಜುಲೈ 1) ಶನಿವಾರ ಸಂಜೆ 6 ಕ್ಕೆ ಶ್ರೀ ಮಠದಲ್ಲಿ ಕರೆಯಲಾಗಿದೆ.