ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದ ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಜರಗಿದ "ಗಡಿನಾಡ ಕಲಾ ಸಾಂಸ್ಕೃತಿಕ ವೈಭವ" ಕಾರ್ಯಕ್ರಮದಲ್ಲಿ ಗಡಿನಾಡಿನಲ್ಲಿ ಕಲೆ- ಸಾಹಿತ್ಯಕ್ಕೆ ನೀಡಿದ ಕೀರ್ತಿಶೇಷರ ಕೊಡುಗೆಗಳು ಹಾಗೂ ಗಡಿನಾಡ ಸಮಸ್ಯೆಗಳ ಬಗ್ಗೆ ವಿಚಾರಗೋಷ್ಠಿ ಜರಗಿತು.
ಗಡಿನಾಡಿನಲ್ಲಿ ಕನ್ನಡದ ಹೋರಾಟ ಎಂಬ ವಿಷಯದ ಬಗ್ಗೆ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು, ಗಡಿನಾಡಿನಲ್ಲಿ ಸಂಗೀತ-ರಂಗಭೂಮಿ- ಚಿತ್ರಕಲೆಯ ಸಾಂಸ್ಕೃತಿಕ ಸ್ವರೂಪ ಎಂಬ ವಿಷಯದ ಬಗ್ಗೆ ಜಯಲಕ್ಷ್ಮಿ ಕಾರಂತ, ಗಡಿನಾಡಿನಲ್ಲಿ ಯಕ್ಷಗಾನ ಪ್ರಸಂಗಕರ್ತರು-ಕಲಾವಿದರು, ಸಂಸ್ಥೆಗಳು,ಮೇಳಗಳು ಎಂಬ ವಿಷಯದ ಬಗ್ಗೆ ಪ್ರಸಂಗಕರ್ತ ಶ್ರೀಧರ ಡಿ.ಯಸ್ ಕಿನ್ನಿಗೊಳಿ, ಗಡಿನಾಡಿನಲ್ಲಿ ಸಮಕಾಲೀನ ಸ್ಥಿತಿ-ಗತಿ ಎಂಬ ವಿಷಯದ ಬಗ್ಗೆ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಗಡಿನಾಡಿನಲ್ಲಿ ಸಾಹಿತ್ಯ ಸೌರಭ ಎಂಬ ವಿಷಯದ ಬಗ್ಗೆ ಕಾರ್ತಿಕ್ ಪಡ್ರೆ ವಿಚಾರ ಮಂಡಿಸಿದರು. ರಾಜಾರಾಮ ರಾವ್ ಮೀಯಪದವು ನಿರೂಪಿಸಿದರು.