ಜೈಪುರ: 'ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಭಾರತ- ಪಾಕಿಸ್ತಾನ ಗಡಿಯಲ್ಲಿ ₹ 10 ಕೋಟಿ ಮೌಲ್ಯದ ಎರಡು ಕೆ.ಜಿ ಹೆರಾಯಿನ್ ಸಾಗಿಸುತ್ತಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ (ಬಿಎಸ್‌ಎಫ್) ಹೊಡೆದುರುಳಿಸಿದ್ದಾರೆ' ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

'ಶ್ರೀಗಂಗಾನಗರ ಜಿಲ್ಲೆಯ ಘರ್ಸಾನಾ ಗಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಶುಕ್ರವಾರ ರಾತ್ರಿ ಗಸ್ತು ತಿರುಗುತ್ತಿದ್ದಾಗ ಡ್ರೋನ್ ಹಾರುತ್ತಿದ್ದ ಶಬ್ಧ ಕೇಳಿಸಿದೆ. ಕೂಡೆಲೇ ಅವರು ಅದನ್ನು ಹೊಡೆದುರುಳಿಸಿದ್ದಾರೆ. ಎರಡು ಪ್ಯಾಕೆಟ್ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಬಿಎಸ್‌ಎಫ್ ಡಿಐಜಿ ಪುಷ್ಪೇಂದ್ರ ಸಿಂಗ್ ರಾಥೋರ್ ಅವರು ಹೇಳಿದರು.
'ಈ ಮಾದಕವಸ್ತುವನ್ನು ಸ್ವೀಕರಿಸಲು ಬರುತ್ತಿದ್ದ ಕಳ್ಳಸಾಗಣೆದಾರರು ಕತ್ತಲಿನಲ್ಲಿ ತಪ್ಪಿಸಿಕೊಂಡಿದ್ದಾರೆ. ಗುಪ್ತಚರ ದಳದವರ ಮಾಹಿತಿಯನ್ನು ಆಧರಿಸಿ ಶಂಕಿತರಿಗಾಗಿ ಶೋಧ ನಡೆಸಲಾಗುತ್ತಿದೆ' ಎಂದರು.