ಉಪ್ಪಳ: ಮುಳಿಂಜ ಜಿ ಎಲ್ ಪಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ಕೃಷಿಕ ನಾರಾಯಣ ಮಾರಾರ್ ಶಾಲಾ ಪರಿಸರದಲ್ಲಿ ತೆಂಗಿನ ಗಿಡವನ್ನು ನೆಡುವುದರ ಮೂಲಕ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬಿ ಆರ್ ಸಿ, ಸಿ ಆರ್ ಸಿ ಸಂಯೋಜಕ ಬಿಜಿಶ್ ಉಪಸ್ಥಿತರಿದ್ದರು. ಶಿಕ್ಷಕಿ ಧನ್ಯ ಸ್ವಾಗತಿಸಿ ಬಶೀರ್ ಮಾಸ್ತರ್ ವಂದಿಸಿದರು. ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ, ಪೋಸ್ಟರ್ ತಯಾರಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಮಕ್ಕಳು, ರಕ್ಷಕರು ಅಧ್ಯಾಪಕರು ಸೇರಿ ಶಾಲಾ ಪರಿಸರವನ್ನು ಶುಚಿಗೊಳಿಸಿದರು.