ನವದೆಹಲಿ: ಪ್ರಮುಖ ಮುಸ್ಲಿಂ ಸಂಘಟನೆ ಜಮೀಯತ್ ಉಲೇಮಾ-ಎ-ಹಿಂದ್ ಸೋಮವಾರ ಮುಸ್ಲಿಮರು ಈದ್-ಉಲ್-ಅಝಾದ ವೇಳೆ ಪ್ರಾಣಿಗಳನ್ನು ಬಲಿ ನೀಡುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಮತ್ತು ಹತ್ಯೆ ಮಾಡಿದ ಪ್ರಾಣಿಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು ಸೋಮವಾರ ಮನವಿ ಮಾಡಿದೆ.
ತ್ಯಾಗದ ಹಬ್ಬ ಎಂದೂ ಕರೆಯಲ್ಪಡುವ ಈದ್ ಉಲ್-ಅಝಾವನ್ನು ಗುರುವಾರ ಆಚರಿಸಲಾಗುತ್ತದೆ.ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಮರು ಪ್ರಾಣಿಗಳನ್ನು ಬಲಿ ನೀಡುವಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ ಎಂದು ಜಮೀಯತ್ ಉಲೇಮೆ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹತ್ಯೆ ಮಾಡಿದ ಪ್ರಾಣಿಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ ಎಂದು ಅವರು ಕರೆ ನೀಡಿದ್ದಾರೆ.
ಮುಸ್ಲಿಮರು 'ಕುರ್ಬಾನಿ(ಬಲಿ) ಮಾಡುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಮತ್ತು ನಿಷೇಧಿತ ಪ್ರಾಣಿಗಳನ್ನು ಬಲಿ ನೀಡಬಾರದು ಎಂದು ಮದನಿ ಮನವಿ ಮಾಡಿದ್ದಾರೆ.