ಎಷ್ಟೇ ಸುಸ್ತಾಗಿದ್ದರೂ ಕೂಡ ಒಂದು ಲೋಟ ಮಜ್ಜಿಗೆ ಕುಡಿದ್ರೆ ಸಾಕು ಸಸ್ತು ಮಾಯವಾಗಿ ಹೋಗುತ್ತೆ. ಬೇಸಿಗೆ ಸಮಯದಲ್ಲಂತೂ ಎಷ್ಟು ಮಜ್ಜಿಗೆ ಕುಡಿದ್ರೂ ಕೂಡ ಸಾಕು ಅಂತ ಅನ್ನಿಸೋದೇ ಇಲ್ಲ. ಇನ್ನೂ ಊಟ ಆದ್ಮೇಲೆ ಅನೇಕರಿಗೆ ಮಜ್ಜಿಗೆ ಕುಡಿಯುವ ಅಭ್ಯಾಸ ಇದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಕೂಡ. ನಿಮಗೆಲ್ಲಾ ಗೊತ್ತಿರೋ ಹಾಗೆ ಮೊಸರಿನಿಂದಲೇ ಮಜ್ಜಿಗೆ ಸೃಷ್ಟಿಯಾಗಿರೋದು. ಆದ್ರೂ ಕೂಡ ಆರೋಗ್ಯದ ದೃಷ್ಟಿಯಿಂದ ಗಮನಿಸಿದ್ರೆ ಮಜ್ಜಿಗೆ ತುಂಬಾನೇ ಒಳ್ಳೆಯದು ಯಾಕೆ ಗೊತ್ತಾ?
ಮಜ್ಜಿಗೆಗಿಂತ ಮೊಸರು ಒಳ್ಳೆಯದು ಯಾಕೆ ಗೊತ್ತಾ?ಮೊಸರನ್ನು ಕಡೆದು ಮಜ್ಜಿಗೆಯನ್ನು ತಯಾರು ಮಾಡಲಾಗುತ್ತದೆ. ಮಜ್ಜಿಗೆಗೆ ಉಪ್ಪು, ಮೆಣಸು ಹಾಕಿದ್ರೆ ಮತ್ತಷ್ಟು ಖಾರವಾಗಿ ರುಚಿಕರವಾಗಿರುತ್ತೆ. ಮಜ್ಜಿಗೆ ಕೇವಲ ರುಚಿಗೆ ಮಾತ್ರವಲ್ಲ ಆರೋಗ್ಯ ದೃಷ್ಟಿಯಿಂದಲೂ ಮೊಸರಿಗಿಂತ ತುಂಬಾನೇ ಒಳ್ಳೆಯದಂತೆ. ಮಜ್ಜಿಗೆ ಜೀರ್ಣಕ್ರಿಯೆಗೆ ಸಹಾಯಕಾರಿಯಾಗಿದೆ. ಮಜ್ಜಿಗೆಗೆ ಹೋಲಿಕೆ ಮಾಡಿದ್ರೆ ಮೊಸರು ಹೈಡ್ರೇಷನ್ ಗೂ ತುಂಬಾನೇ ಒಳ್ಳೆಯದು.
ಮಜ್ಜಿಗೆಯಿಂದಾಗುವ ಆರೋಗ್ಯಕಾರಿ ಪ್ರಯೋಜನಗಳೇನು?
ಮಜ್ಜಿಗೆ ಡಿಹೈಡ್ರೇಷನ್ ದೂರ ಮಾಡೋದು ಮಾತ್ರವಲ್ಲದೇ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು. ಇದರ ಹೊರತಾಗಿ ಬೇರೇನೆಲ್ಲಾ ಉಪಯೋಗಗಳು ಇದೆ ಅಂತ ನೋಡೋದಾದ್ರೆ : * ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡಿದ ನಂತರ ಹೊಟ್ಟೆಯ ಒಳಭಾಗದ ಕಿರಿ ಕಿರಿಯನ್ನು ಶಮನಗೊಳಿಸಲು ನೆರವಾಗುತ್ತದೆ. * ನಾವು ಅತಿಯಾಗಿ ಆಹಾರ ಸೇವಿಸಿದ ನಂತರ ಮಜ್ಜಿಗೆ ಸೇವಿಸಿದ್ರೆ ಕೊಬ್ಬು ಕಡಿಮೆ ಮಾಡೋದಕ್ಕೆ ಸಹಾಯವಾಗುತ್ತದೆ. * ಹಾಲಿನ ನಂತರ ಅತಿ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ ದ್ರವ ಮಜ್ಜಿಗೆ * ಮಜ್ಜಿಗೆಯಲ್ಲಿ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿ ಇರೋದ್ರಿಂದ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಇತರ ಉಪಯೋಗಗಳು
ಇತರ ಉಪಯೋಗಗಳು
* ಮಜ್ಜಿಗೆಯಲ್ಲಿ ಕಂಡುಬರುವ ಹಾಲಿನ ಕೊಬ್ಬಿನ ಗ್ಲೋಬ್ಯುಲ್ ಪೊರೆಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿವೆ ಎಂದು ಅಧ್ಯಯನವೊಂದು ಸಾಬೀತುಪಡಿಸಿದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಜೈವಿಕ ಸಕ್ರಿಯ ಪ್ರೋಟೀನ್ ಆಗಿದೆ. * ಕೊಬ್ಬಿನ ಗ್ಲೋಬ್ಯುಲ್ ಪೊರೆಗಳು ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಕ್ಯಾನ್ಸರ್ ಕೂಡ. * ಇದು ಆಸಿಡಿಟಿಯಿಂದಾಗಿ ಕಿರಿಕಿರಿಗೊಂಡ ಹೊಟ್ಟೆಯ ಒಳಪದರವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಆಮ್ಲೀಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಮಜ್ಜಿಗೆಗೆ ಬದಲಾಗಿ ಮೊಸರು ಯಾವಾಗ ಸೇವನೆ ಮಾಡಬೇಕು?
ಮಜ್ಜಿಗೆಗೆ ಬದಲಾಗಿ ಮೊಸರು ಯಾವಾಗ ಸೇವನೆ ಮಾಡಬೇಕು?
* ಕೆಲವೊಂದು ಸಮಯದಲ್ಲಿ ನಾವು ಮಜ್ಜಿಗೆ ಕುಡಿಯೋದನ್ನು ತಡೆಯುತ್ತೇವೆ. ಇಂತಹ ಸಂದರ್ಭದಲ್ಲಿ ಮೊಸರು ಸೇವಿಸಿದರೆ ಉತ್ತಮ. * ಹೆಚ್ಚಿನ ಜನರು ತೂಕ ಹೆಚ್ಚಿಸಿಕೊಳ್ಳೋದಕ್ಕೆ ಪ್ರಯತ್ನಿಸುತ್ತಾರೆ. ಇಂತವರಿಗೆ ಮೊಸರು ಉತ್ತಮ ಆಯ್ಕೆಯಾಗಿದೆ. ಯಾಕಂದ್ರೆ ಇದ್ರಲ್ಲಿ ಪೋಷಕಾಂಶ ಅಭಿಕಾವಾಗಿರುತ್ತದೆ. * ಮೂತ್ರ ಪಿಂಡದ ಸಮಸ್ಯೆ ಅಥವಾ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು ದ್ರವ ನಿರ್ಬಂಧಿತ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ಅವರು ಹೆಚ್ಚಿನ ಪೋಷಕಾಂಶ ಸೇವಿಸುವುದು ಮುಖ್ಯವಾಗುತ್ತದೆ. ಅಂತವರು ಮೊಸರು ಸೇವನೆ ಮಾಡಬಹುದು.