ಕಾಸರಗೋಡು: ಕೇರಳ ಮಾಪಿಳ್ಳ ಕಲಾ ಅಕಾಡೆಮಿ ಜಿಲ್ಲಾ ಸಮಿತಿಯು ನಿರ್ಗತಿಕರಿಗಾಗಿ ನಿರ್ಮಿಸಿರುವ ಮನೆಯ ಕೀಲಿಕೈ ಹಸ್ತಾಂತರ ಹಾಗೂ ಸಾಂಸ್ಕøತಿಕ ಸಮಾರಂಭ ಜೂ. 16ರಂದು ಸಂಜೆ 5ಕ್ಕೆ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಜರುಗಲಿದೆ. ಸೈಯದ್ ಜಾಫರ್ ಸಾದಿಕ್ ತಙಳ್ ಮನೆಯ ಕೀಲಿಕೈ ಹಸ್ತಾಂತರಿಸಲಿರುವುದಾಗಿ ಅಕಡಮಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜೀಬ್ ಕಂಬಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾಂಸ್ಕøತಿಕ ಸಮ್ಮೇಳನವನ್ನು ಶಾಸಕ ಎನ್.ಎ.ನೆಲ್ಲಿಕುನ್ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ರವೂಫ್ ಬಾವಿಕೆರೆ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎಕೆಎಂ ಅಶ್ರಫ್, ಇ. ಚಂದ್ರಶೇಖರನ್, ಸಿ.ಎಚ್.ಕುಞಂಬು, ಎಂ. ರಾಜಗೋಪಾಲನ್, ಮಾಜಿ ಸಚಿವ ಸಿ.ಟಿ.ಅಹಮದಾಲಿ, ಕಾಸರಗೋಡು ನಗರ ಸಭಾ ಅಧ್ಯಕ್ಷವವಿ.ಎಂ.ಮುನೀರ್, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮೀರಾ ಫೈಸಲ್, ಯಾಹ್ಯಾ ತಳಂಗರೆ, ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಮ್, ಟಿ.ಎ.ಶಾಫಿ, ಕೇರಳ ಮಾಪಿಲ ಕಲಾ ಅಕಾಡೆಮಿಯ ರಾಜ್ಯಾಧ್ಯಕ್ಷ ಪಿ.ಎಚ್.ಅಬ್ದುಲ್ಲಾ ಮುಂತಾದವರು ಉಪಸ್ಥಿತರಿರುವರು. ನಂತರ ಖ್ಯಾತ ಮಾಪಿಲಪಾಟ್ ಕಲಾವಿದರನ್ನೊಳಗೊಂಡ 'ಇಶಾಲ್ ಸಂಧ್ಯಾ'ಕಾರ್ಯಕ್ರಮವನ್ನು ಚಲನಚಿತ್ರ ನಟ ಉಣ್ಣಿರಾಜ್ ಉದ್ಘಾಟಿಸುವರು. ಕೆ.ಬಿ.ಕುಞËಮು ಅವರು ಏರಿಯಾಲ್ ಕೊಲ್ಲಮೆಯಲ್ಲಿ ನೀಡಿದ ಮೂರು ಸೆಂಟ್ಸ್ ಜಾಗದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಪದವಿ ಓದುತ್ತಿರುವ ಅಂಧ ಗಾಯಕನ ಕುಟುಂಬಕ್ಕೆ ಮನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರವೂಫ್ ಬಾವಿಕೆರೆ, ಪ್ರಧಾನ ಕಾರ್ಯದರ್ಶಿ ಸಿ.ಎ ಅಹಮದ್ ಕಬೀರ್, ಕೋಶಾಧಿಕಾರಿ ಅಬ್ದುಲ್ಲಾ ಪಡನ್ನ, ಶಾಫಿ ಚೇರೂರ್, ಮೂಸಾ ಬಾಸಿತ್ ಉಪಸ್ಥಿತರಿದ್ದರು.