HEALTH TIPS

ಮಣಿಪುರ ಹಿಂಸಾಚಾರ: ಶಾಂತಿ, ಸೌಹಾರ್ದಕ್ಕೆ ಆರ್‌ಎಸ್‌ಎಸ್‌ ಮನವಿ

                ವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಖಂಡಿಸಿದೆ. ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ, ಸ್ಥಳೀಯ ಆಡಳಿತ, ಪೊಲೀಸರು ಮತ್ತು ಭದ್ರತಾ ಪಡೆಗಳು ಸೇರಿ ಕೇಂದ್ರೀಯ ಸಂಸ್ಥೆಗಳಲ್ಲಿ ಮನವಿ ಮಾಡಿದೆ.

             'ಶಾಂತಿ ಮತ್ತು ಸೌಹಾರ್ದಕ್ಕೆ ಕ್ರಮ ಕೈಗೊಳ್ಳುವ ಜೊತೆಗೆ ಹಿಂಸಾಚಾರದಿಂದ ನಲುಗಿ ಸ್ಥಳಾಂತರಗೊಂಡಿರುವ ಜನರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಒದಗಿಸಿ' ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

              'ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹಿಂಸಾಚಾರ ಮತ್ತು ದ್ವೇಷಕ್ಕೆ ಜಾಗ ಇಲ್ಲ. ಉಭಯ ಸಮುದಾಯಗಳು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು. ಯಾವುದೇ ಸಮಸ್ಯೆಗೂ ಮಾತುಕತೆ ಮತ್ತು ಸಹೋದರತ್ವದಲ್ಲಿ ಪರಿಹಾರವಿದೆ' ಎಂದು ಹೇಳಿದ್ದಾರೆ.

                 ಹಿಂಸೆ ಮತ್ತು ಗಲಭೆ ನಿಯಂತ್ರಣಕ್ಕೆ ಪ್ರತಿಯೊಬ್ಬ ಪ್ರಜೆ, ರಾಜಕೀಯ ಗುಂಪುಗಳೂ ಸಾಧ್ಯವಾದ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.

                                        ಕಾಂಗ್ರೆಸ್ ವ್ಯಂಗ್ಯ:

            ಆರ್‌ಎಸ್‌ಎಸ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, 'ಸಂಘರ್ಷ ಆರಂಭವಾಗಿ 45 ದಿನಗಳಾಗಿವೆ. ನಂತರ ಕೊನೆಗೂ ಆರ್‌ಎಸ್‌ಎಸ್‌ ಶಾಂತಿ, ಸೌಹಾರ್ದ ಬಯಸಿ ಜನರಲ್ಲಿ ಮನವಿ ಮಾಡಿದೆ. ಆರ್‌ಎಸ್‌ಎಸ್‌ನ ಇಬ್ಭಾಗ ಮತ್ತು ಧ್ರವೀಕರಣ ನೀತಿ ಈಶಾನ್ಯ ರಾಜ್ಯದ ವೈವಿಧ್ಯಮಯ ಸ್ವರೂಪವನ್ನೂ ಕದಡಿದೆ' ಎಂದು ಆರೋಪಿಸಿದೆ.

               ಮಿಜೋರಾಂ ಸಿ.ಎಂ ಜೊತೆ ಬಿರೆನ್ ಸಿಂಗ್‌ ಮಾತುಕತೆ ಗುವಾಹಟಿ: ಮಣಿಪುರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷ ತಡೆಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಎನ್.ಬಿರೆನ್‌ ಸಿಂಗ್‌ ಅವರು ಮಿಜೋರಾಂ ಮುಖ್ಯಮಂತ್ರಿ ಜೋರಾಮ್‌ಥಂಗಾ ಅವರಿಗೆ ಭಾನುವಾರ ಮನವಿ ಮಾಡಿದರು. ಸಿಂಗ್‌ ಮಧ್ಯಾಹ್ನ 12.30ರ ಸುಮಾರಿಗೆ ಕರೆ ಮಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಿಜೋರಾಂನಲ್ಲಿ ನೆಲೆಸಿರುವ ಮೈತೇಯಿ ಸಮುದಾಯದ ಜನರ ರಕ್ಷಣೆಗೂ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಅನಂತರ ಟ್ವೀಟ್‌ ಮಾಡಿರುವ ಜೋರಾಮ್‌ಥಂಗಾ ಅವರು 'ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತೀವ್ರ ನೋವಿದೆ. ಹಿಂಸಾಚಾರ ನಿಯಂತ್ರಣಕ್ಕೆ ರಾಜ್ಯವೂ ಕೆಲ ಕ್ರಮಗಳನ್ನು ಕೈಗೊಂಡಿದೆ. ಮಣಿಪುರ ಮತ್ತು ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ಬೆಂಬಲಿಸುತ್ತೇವೆ' ಎಂದಿದ್ದಾರೆ. 'ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಶಾಂತಿ ಮತ್ತು ಭದ್ರತೆಗೆ ಕ್ರಮ ಕೈಗೊಂಡಿವೆ. ಮಿಜೋರಾಂನಲ್ಲಿರುವ ಮೈತೇಯಿ ಸಮುದಾಯದ ಜನರು ಭಯಪಡಬೇಕಾದ ಅಗತ್ಯವಿಲ್ಲ' ಎಂದೂ ಹೇಳಿದ್ದಾರೆ. ಸಂಘರ್ಷದ ಬಳಿಕ ರಾಜ್ಯದ ಸುಮಾರು 11 ಸಾವಿರ ಕುಕಿಗಳು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ. ಈ ಕಾರಣಕ್ಕೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಮಾತುಕತೆಯು ಮಹತ್ವ ಪಡೆದಿದೆ. ಮೈತೇಯಿ ಮತ್ತು ಕುಕಿ ಸಮುದಾಯದ ಮಧ್ಯೆ ಸಂಘರ್ಷ ಆರಂಭವಾದ ನಂತರ ರಾಜ್ಯದಲ್ಲಿ 115 ಮಂದಿ ಮೃತಪಟ್ಟಿದ್ದಾರೆ 60 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಈ ಮಧ್ಯೆ ಕುಕಿ ಸಮುದಾಯದ ಕೆಲವು ಶಾಸಕರು (ಬಿಜೆಪಿಯವರೂ ಸೇರಿ) ಮಿಜೋರಾಂಗೆ ಭೇಟಿ ನೀಡಿ ತಮ್ಮ ಸಮುದಾಯದ ಜನರು ಹೆಚ್ಚಿರುವ ಮಣಿಪುರದ ಪ್ರದೇಶಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಬೇಕು ಎಂಬ ತಮ್ಮ ಬೇಡಿಕೆ ಕುರಿತು ಚರ್ಚೆ ನಡೆಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries