ಕೇರಳ ಚಲನಚಿತ್ರ ನಿರ್ದೇಶಕ ರಾಮಸಿಂಹನ್ ಅಬೂಬಕ್ಕರ್(Ramasimhan Aboobakker) ಅವರು ಇಂದು ಅಧಿಕೃತವಾಗಿ ಬಿಜೆಪಿಯನ್ನು(BJP) ತೊರೆದಿದ್ದು, ಪಕ್ಷದಿಂದ ಹೊರಬಂದರೂ ಕೂಡ ಪ್ರಧಾನಿ ಮೋದಿ ಅವರನ್ನು ಸದಾ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ರಾಮಸಿಂಹನ್ ಅಬೂಬಕ್ಕರ್ ಅವರು ತಾವು ಬಿಜೆಪಿ ತೊರೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಬೂಬಕ್ಕರ್, 'ನಾನು ಯಾವಾಗಲೂ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತೇನೆ. ಕಲಾವಿದರು ಯಾವುದೇ ರಾಜಕೀಯ ಪಕ್ಷದ ಗುಲಾಮರಲ್ಲ. ಚುನಾವಣೆ ಸಂದರ್ಭದಲ್ಲಿ ಕಲಾವಿದರು ಶೋಪೀಸ್ ಅಲ್ಲ, ಜಗತ್ತನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ನಾವು ಪ್ರಮುಖರು ಎಂಬುದನ್ನು ಪಕ್ಷ ಅರಿಯಬೇಕು. ಕೇರಳ ಬಿಜೆಪಿಯಲ್ಲಿನ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ನಾಯಕತ್ವಕ್ಕೆ ಅರಿವಿದೆ' ಎಂದು ಹೇಳಿದ್ದಾರೆ.
ಕಳೆದ ವಾರದಲ್ಲಿ ಬಿಜೆಪಿ ತೊರೆದ ನಿರ್ದೇಶಕ ಅಬೂಬಕ್ಕರ್, ಇಂದು ಫೇಸ್‌ಬುಕ್‌ನಲ್ಲಿ(Facebook) ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ತಮ್ಮ ರಾಜೀನಾಮೆ(Resignation) ಪತ್ರವನ್ನು ಕೇರಳ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್ ಅವರಿಗೆ ಇಮೇಲ್ ಮುಖಾಂತರ ಕಳುಹಿಸಿದ್ದಾರೆ.