ಕಾಸರಗೋಡು: ಐಸಿಎಆರ್-ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ನ ತಂತ್ರಜ್ಞಾನ ವರ್ಗಾವಣೆ ಉಪಕ್ರಮಗಳ ಭಾಗವಾಗಿ ರೈತ ಸಮುದಾಯ ಮತ್ತು ಇತರ ಪಾಲುದಾರರಿಗೆ ಅನುಕೂಲವಾಗುವಂತೆ 'ತೆಂಗು ಉತ್ಪಾದನೆ ಮತ್ತು ಮೌಲ್ಯವರ್ಧನೆ ತಂತ್ರಜ್ಞಾನಗಳ' ಕುರಿತು ತರಬೇತಿ ಕಾರ್ಯಕ್ರಮವನ್ನು ನಿನ್ನೆ ಕಾಸರಗೋಡಿನ ಸಿಪಿಸಿಆರ್‍ಐನಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಇನ್ಬಶೇಖರ್. ಕೆ. ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಅವರು, ರೈತರು ಮತ್ತು ಉದ್ಯಮಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಸಿಪಿಸಿಆರ್‍ಐ ಮತ್ತು ಇತರ ಸಂಸ್ಥೆಗಳಿಂದ ಲಭ್ಯವಿರುವ ತೆಂಗು ಉತ್ಪಾದನೆ ಮತ್ತು ಮೌಲ್ಯವರ್ಧನೆಗಾಗಿ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ವಿನಂತಿಸಿದರು.
ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ.ಬಿ. ಹೆಬ್ಬಾರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನ ವಿಜ್ಞಾನಿ ಡಾ.ಎ.ಸಿ.ಮ್ಯಾಥ್ಯೂ ಅವರನ್ನು ಇಂಬಶೇಖರ್ ಸನ್ಮಾನಿಸಿದರು. ಇಕ್ಬಾಲ್, ಸಹಾಯಕ ಜಿಲ್ಲಾ ಕುಟುಂಬಶ್ರೀ ಮಿಷನ್ ಸಂಯೋಜಕ ಶಶಿಕುಮಾರ್.ಸಿ, ಸಿಇಒ, ಸಿಆರ್ಡಿ ನೀಲೇಶ್ವರ್ ಸನ್ಮಾನಿಸಿದರು.
ಪ್ರಧಾನ ಕೃಷಿ ವಿಜ್ಞಾನಿ ಡಾ.ತಂಬಾನ್ ಸ್ವಾಗತಿಸಿ, ಹಿರಿಯ ವಿಜ್ಞಾನಿ ಡಾ.ಪ್ರತಿಭಾ ಪಿ.ಎಸ್ ವಂದಿಸಿದರು.