ಕಾಸರಗೋಡು: ಕೇರಳಾದ್ಯಂತ ಜಾರಿಗೆಬಂದಿರುವ ಕೆ-ಫೆÇೀನ್ ಯೋಜನೆಯ ಕಾಸರಗೋಡು ಮಂಡಲ ಮಟ್ಟದ ಉದ್ಘಾಟನೆ ನಾಯಮರ್‍ಮೂಲೆ ಟಿಐಎಚ್‍ಎಸ್‍ಎಸ್ ಶಾಲೆಯಲ್ಲಿ ಜರುಗಿತು. ಖ್ಯಾತ ಶಿಲ್ಪಿ ಕಾನಾಯಿ ಕುಞÂರಾಮನ್ ಸಮಾರಂಭ ಉದ್ಘಾಟಿಸಿದರು. ಕೆ-ಫೆÇೀನ್ ಯೋಜನೆ ಕೇರಳೀಯರಿಗೆ ವರದಾನವಾಗಿ ಪರಿಣಮಿಸಲಿದ್ದು, ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ನಾವು ಯೋಚನೆಗಳನ್ನೂ ಹರಿಯಬಿಡಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕೆ. ಇಭಾಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಚೆಂಗಳ ಗ್ರಾಪಂ ಸದಸ್ಯ ವೇಣುಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಚೆಂಗಳ ಗ್ರಾ.ಪಂ.ಸದಸ್ಯರಾದ ಪಿ.ಶಿವಪ್ರಸಾದ್, ಸವಿತಾ, ಲತೀಫ್, ಗಿರೀಶ್, ಚಿತ್ರಕುಮಾರಿ, ಹರೀಶ್, ನಾಯನಮೂಲ ಬದರ್ ಜುಮಾ ಮಸೀದಿ ಅಧ್ಯಕ್ಷ ಎನ್.ಎ.ಅಬೂಬಕರ್ ಹಾಜಿ, ಟಿ.ಐ.ಎಚ್.ಎಸ್.ಎಸ್ ನಯನಮೂಲೆ ವ್ಯವಸ್ಥಾಪಕ ಎಂ.ಅಬ್ದುಲ್ಲಾ ಹಾಜಿ, ಟಿ.ಐ. ಎಚ್‍ಎಸ್‍ಎಸ್ ನಾಯನರಮೂಲ ಪಿಟಿಎ ಅಧ್ಯಕ್ಷ ಎ.ಎಲ್.ಎಸ್.ಪಿ. ಮುಹಮ್ಮದಲಿ, ಕಾರ್ಯನಿರ್ವಾಹಕ ನಿರ್ದೇಶಕರ ಸಹಾಯಕ ಎಂ.ಜಿ .ಮನೋಜ್ ಮ್ಯಥ್ಯೂ ಕೆಎಸ್‍ಇಬಿ ಸಹಾಯಕ ಎಂಜಿನಿಯರ್ ಬಿ.ಅಹಮದ್, ಐಕೆಎಂ ತಾಂತ್ರಿಕ ಅಧಿಕಾರಿ ಅನೀಶ್ ಕುಮಾರ್, ಕೆ.ಫೆÇೀನ್ ಪ್ರಭಾರಿ ಸನೀಶ ಉಪಸ್ಥಿತರಿದ್ದರು. ಕಾಸರಗೋಡು ತಾಲೂಕು ತಹಸೀಲ್ದಾರ್ ಸಾದಿಕ್ ಬಾಷಾ ಸ್ವಾಗತಿಸಿದರು, ಚೆಂಗಳ ಗ್ರಾಮ ಪಂಚಾಯತ್ ಕಾರ್ಯದರ್ಶಿ ಎಸ್.ಹರಿಕುಮಾರ್ ವಂದಿಸಿದರು.
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಸಮಾರಂಭದಲ್ಲಿ ಆಯಾ ಕ್ಷೇತ್ರದ ಶಾಸಕರು ಕೆ-ಫೋನ್ ಯೋಜನೆಗೆ ಚಾಲನೆ ನೀಡಿದರು.