HEALTH TIPS

ಮೀಯಪದವಲ್ಲಿ ಭಾರತೀಯ ಕಿಸಾನ್ ಸಂಘದ ಸಭೆ

          ಮಂಜೇಶ್ವರ:  ಭಾರತೀಯ ಕಿಸಾನ್ ಸಂಘ ಮೀಂಜ ಪಂಚಾಯತಿ ಸಮಾವೇಶ ಮೀಯಪದವು ವಿ.ಎ.ಯು.ಪಿ ಶಾಲಾ ವಠಾರದಲ್ಲಿ ಜರಗಿತು. 

             ಕಿಸಾನ್ ಸಂಘದ ಮೀಂಜ ಘಟಕ ಸಂಚಾಲಕ ಜಗನ್ನಾಥ ಮಾಸ್ತರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಜಲನಿಧಿಯ ನಿಲುಗಡೆಗೆ ಖೇದ ವ್ಯಕ್ತಪಡಿಸಿದರು. ಈ ತನಕ ಮಾರ್ಗದ ದುರಸ್ತಿಯಾಗದೆ ಹಿರಿಯ ಮಾತೆಯರೊಬ್ಬರಿಗೆ ಪಕ್ಷವಾತ ಬಾಧಿಸಿದ್ದಾಗ ಮೂರು ಗಂಟೆಗೆ ತಡವಾಗಿ ಆಸ್ಪತ್ರೆಗೆ ಸೇರಿಸುವಂತಾಯಿತು. ಮಳೆಗಾದಲ್ಲಿ ವಾಹನವಾಗಲಿ ನಡೆದು ಹೋಗಲೂ ಕಷ್ಟಕರ ಸ್ಥಿತಿ ಒದಗಿದೆ. ಕೋಟ್ಯಂತರ ಹಣ ಸರ್ಕಾರ ಮತ್ತು ಜನರು ಕಂಬಳ ಇನ್ನಿತರ ನಿರುತ್ಪಾದಕ ಕಾರ್ಯಗಳಿಗೆ ಬಳಸುತ್ತಾರೆ. ಇಂದಿನ ಯುವಕ ಯುವತಿಯರು ಉದ್ಯೋಗವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಡವರ ಜೀವನವು ಶೋಚನೀಯ ಸ್ಥಿತಿಯಲ್ಲಿದೆ. ಜಲನಿಧಿ  ಮೂರನೆ ಬಾರಿಯೂ ಕುಡಿ ನೀರಿನ ಪೈಪು ಅಳವಡಿಸಿ ಪಂಚಾತಿಗೆ ನೀರು ಪೂರೈಸಲಾಗಲಿಲ್ಲ. ದುಬಾರಿ ಹಣತೆತ್ತು ಜನರು ಬೇಸಿಗೆಯಲ್ಲಿ ನೀರು ತರಿಸಿಕೊಂಡರು ಎಂದವರು ಬೊಟ್ಟುಮಾಡಿ ತರಾಟೆಗೈದರು.

          ಭಾ.ಕಿ.ಸಂ ರಾಜ್ಯ ಉಪಾಧ್ಯಕ್ಷ ರಾಮ ಮಾಸ್ತರ್ ಕಳತ್ತೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾನಂದ ಕೊಮ್ಮಂಗಳ ಕೃಷಿಕರಿಗೆ ಮೈಲು ತುತ್ತನ್ನು ಈ ಕೂಡಲೇ ವಿತರಿಸಬೇಕೆಂದು ಒತ್ತಾಯಿಸಿದರು.  ರಾಜ್ಯ ಸಂಘಟನಾ ಕಾರ್ಯದರ್ಶಿ ಸಹದೇವನ್ ಕಣ್ಣೂರು ಸದಸ್ಯತನದ ಬಗ್ಗೆ ಭಾ.ಕಿ.ಸಂ ಕಾರ್ಯಕರ್ತರ ಜವಬ್ದಾರಿಯನ್ನು ನೆನೆಪಿಸಿದರು. ರಾಮ ಮಾಸ್ತರ್ ಅವರು, ಭಾ.ಕಿ.ಸಂ.ನ ರೂಪು ರೇಖೆಗಳ ಬಗ್ಗೆ ಮಾಹಿತಿ ನೀಡಿದರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಬಾಲಕೃಷ್ಣ ಕೋಡಿ, ಖಜಾಂಚಿ ವಿನೋದ್.ರೈ. ಕೆ.ಯು ಸತೀಶ್ಚಂದ್ರ ರೈ ದೇರಂಬಳ, ಚಂದ್ರಶೇಕರ್ ನಾಯಕ್ ಮಾಸ್ತರ್, ಸುರೇಶ್ ಹೊಳ್ಳ, ಅಕ್ಷಯ ಕುಮಾರ್, ರಾಧಾಕೃಷ್ಣ ರೈ ಕಳ್ಳಿಗೆ ಉಪಸ್ಥಿತರಿದ್ದರು. ಜಗನ್ನಾಥ ಮಾಸ್ತರ್  ವಂದಿಸಿದರು. ರಾಮಚಂದ್ರ.ಯು ಪ್ರಾರ್ಥನೆ ಹಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries