ಕಾಸರಗೋಡು: ಮಾಂಸದ ಕೋಳಿ ಅಂಗಡಿಗಳಲ್ಲಿ ಅಧಿಕ ದರ ವಸೂಲಿ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ವಿತರಣಾ ಇಲಾಖೆಯ ಅಧಿಕಾರಿಗಳು ತ್ರಿಕರಿಪುರ, ಪಡನ್ನ ಮತ್ತು ಕಾಞಂಗಾಡ್‍ನಲ್ಲಿ ತಪಾಸಣೆ ನಡೆಸಿದರು.
ತ್ರಿಕರಿಪುರದಲ್ಲಿ 135 ರೂ.ಗೆ ಖರೀದಿಸಿದ ಕೋಳಿಯನ್ನು 170 ರೂ.ಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಪಡನ್ನದಲ್ಲಿ 160 ಮತ್ತು ಕಾಞಂಗಾಡ್ ನಲ್ಲಿ 155 ರಿಂದ 160ವರೆಗೆ ಶುಲ್ಕ ವಿಧಿಸಲಾಗುತ್ತದೆ. ಅಧಿಕ ದರ ವಸೂಲಿ ಮಾಡುತ್ತಿರುವುದರ ವಿರುದ್ಧ ಅಧಿಕಾರಿಗಳು ವ್ಯಾಪಾರಿಗಲಿಗೆ ಎಚ್ಚರಿಕೆ ನೀಡಿದರು. ವಿವಿಧ ಅಮಗಡಿಗಳಿಗೆ ತೆರಳಿ ಸಾಂಗ್ರಿಗಳ ದರ ಪರಿಶೀಲನೆ ನಡೆಸಿದರು. ತಪಾಸಣೆಯಲ್ಲಿ ಹೊಸದುರ್ಗ ತಾಲೂಕು ಸರಬರಾಜು ಅಧಿಕಾರಿ ಕೆ.ಎನ್.ಬಿಂದು, ಪಡಿತರ ನಿರೀಕ್ಷಕರಾದ ಸೈಫುದ್ದೀನ್, ಪಿ.ಕೆ. ಶಶಿಕುಮಾರ್, ವಿ.ಹರಿದಾಸ್ ಭಾಗವಹಿಸಿದ್ದರು.