ನವದೆಹಲಿ: ಸಂಪೂರ್ಣವಾಗಿ ಎಥೆನಾಲ್ ಬಳಸಿಕೊಂಡೇ ಚಲಿಸುವ ಹೊಸ ವಾಹನಗಳನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ. ಈ ಹಿಂದೆಯೂ ಕೇಂದ್ರ ಸಚಿವರು, ಮುಂದಿನ 5 ವರ್ಷದಲ್ಲಿ ಪೆಟ್ರೋಲ್ ಭಾರತದಲ್ಲಿ ಬಳಕೆಯಲ್ಲಿ ಇರುವುದಿಲ್ಲ ಎಂದಿದ್ದರು.

ನಾಗ್ ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ಇತ್ತೀಚೆಗೆ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದ ಮರ್ಸಿಡಿಸ್ ಬೆಂಝ್ ಕಂಪನಿಯ ಅಧ್ಯಕ್ಷರನ್ನು ಭೇಟಿ ಮಾಡಿದ್ದನ್ನು ನೆನಪಿಸಿಕೊಂಡರು.
'ಬೆಂಜ್ ಸಂಸ್ಥೆಯ ಅಧ್ಯಕ್ಷರು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ತಯಾರಿಸುತ್ತೇವೆ ಎಂದು ಹೇಳಿದ್ದಾರೆ. ನಾವು ಸಂಪೂರ್ಣವಾಗಿ ಎಥೆನಾಲ್ ನಿಂದ ಚಲಿಸುವ ಹೊಸ ವಾಹನಗಳನ್ನು ತರುತ್ತಿದ್ದೇವೆ. ಬಜಾಜ್, ಟಿವಿಎಸ್ ಮತ್ತು ಹೀರೋ ಸ್ಕೂಟರ್ ಗಳು ಶೇಕಡಾ 100ರಷ್ಟು ಎಥೆನಾಲ್ ನಿಂದ ಚಲಿಸಲಿವೆ' ಎಂದು ಸಚಿವರು ಹೇಳಿದರು.
ಆಗಸ್ಟ್ ತಿಂಗಳಲ್ಲಿ ಟೊಯೊಟಾ ಕಂಪನಿಯ ಕ್ಯಾಮ್ರಿ ಕಾರನ್ನು ಬಿಡುಗಡೆ ಮಾಡುವುದಾಗಿ ಗಡ್ಕರಿ ಹೇಳಿದ್ದು ಅದು ಶೇಕಡಾ 100ರಷ್ಟು ಎಥೆನಾಲ್ ಇಂಧನದಲ್ಲಿ ಚಲಿಸುತ್ತದೆ. ಇದಿಷ್ಟೇ ಅಲ್ಲದೇ ಇದು ಶೇಕಡಾ 40 ರಷ್ಟು ವಿದ್ಯುತ್ ಉತ್ಪಾದಿಸುತ್ತದೆ.'ನೀವು ಇದನ್ನು ಪೆಟ್ರೋಲ್ನೊಂದಿಗೆ ಹೋಲಿಕೆ ಮಾಡಿದರೆ, ಪ್ರತಿ ಲೀಟರ್ ಎಥೆನಾಲ್, ಪೆಟ್ರೋಲಿಗಿಂತ 15 ರೂ. ಕಡಿಮೆಗೆ ಸಿಗಲಿದೆ. ಏಕೆಂದರೆ ಎಥೆನಾಲ್ ದರ ಕೇವಲ 60 ರೂ. ಇರಲಿದೆ., ಪ್ರತಿ ಲೀಟರ್ ಪೆಟ್ರೋಲ್ ದರವು ಕೆಲವೆಡೆ 105 ರೂ. ಕೂಡ ಇದೆ. ಅದಲ್ಲದೇ ಎಥೆನಾಲ್ ಶೇಕಡಾ 40 ರಷ್ಟು ವಿದ್ಯುತ್ ಕೂಡ ಉತ್ಪಾದಿಸುತ್ತದೆ. ಅಂದರೆ, ಪ್ರತಿ ಲೀಟರಿಗೆ ಸರಾಸರಿ 15 ರೂ. ಉಳಿತಾಯವಾಗಲಿದೆ' ಎಂದಿದ್ದಾರೆ.