ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ವತಿಯಿಂದ ತ್ಯಾಜ್ಯ ಮುಕ್ತ ನವ ಕೇರಳ ಎಂಬ ಧ್ಯೇಯ ವಾಕ್ಯದಡಿ ಹಸಿರು ಸಭೆ ಎಂಬ ಕಾರ್ಯಕ್ರಮವನ್ನು ಪಂಚಾಯತಿ ಸಭಾಂಗಣದಲ್ಲಿ ನಡೆಸಲಾಯಿತು. ಪರಿಸರ ದಿನಾಚರಣೆಯಂದು ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ. ಸಂಪೂರ್ಣ ಮಾಲಿನ್ಯ ಮುಕ್ತ ಹಾಗೂ ತ್ಯಾಜ್ಯಗಳನ್ನು ಎಸೆಯದ ಗ್ರಾಮ ಪಂಚಾಯನ್ನಾಗಿ ಘೋಷಿಸಿ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಶಿಕ್ಷಣಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆವಹಿಸಿದ್ದರು.
ಜಿ.ಪಂ.ಸದಸ್ಯ ನಾರಾಯಣ ನಾಯ್ಕ, ಗ್ರಾ.ಪಂ. ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್, ಪಂ.ಸದಸ್ಯರಾದ ಮಹೇಶ್ ಭಟ್, ನರಸಿಂಹ ಪೂಜಾರಿ, ರಾಮಚಂದ್ರ, ರಮ್ಲ, ರೂಪವಾಣಿ ಆರ್. ಭಟ್, ಶಶಿಕಲಾ, ಉಷಾ ಕುಮಾರಿ, ಇಂದಿರಾ, ಕುಸುಮಾವತಿ, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಪಂ.ಕಾರ್ಯದರ್ಶಿ ಸುನಿಲ್ ಆರ್, ಹೆಡ್ ಕ್ಲಾರ್ಕ್ ಪ್ರೇಮ್ ಚಂದ್, ಪಂ.ಅವಲೋಕನ ಸಮಿತಿಯ ಆಯಿμÁ ಎ.ಎ, ರಾಜರಾಮ ಪೆರ್ಲ ಮೊದಲಾದವರು ಮಾತನಾಡಿದರು.
ಪಂ.ಸಹಾಯಕ ಕಾರ್ಯದರ್ಶಿ ರೋಬಿನ್ ಸನ್ ಕೆ.ಜೆ. ಪರಿಸರ ಸಂರಕ್ಷಣೆ ಪ್ರತಿಜ್ಞೆಯನ್ನು ಬೋಧಿಸಿದರು. ಮಾಲಿನ್ಯ ಮುಕ್ತ ಎಣ್ಮಕಜೆ ಯೋಜನೆಗೆ ಅನ್ವಯವಾಗಿ ರಚಿಸಿದ ಸಮಿತಿಯ ವಿವಿಧ ಸಂಘ ಸಂಸ್ಥೆ, ಕುಟುಂಬಶ್ರೀ, ಹಸಿರು ಕ್ರಿಯಾಸೇನೆ, ಆಶಾ ಕಾರ್ಯಕರ್ತೆಯರು ಹಾಗೂ ಉದ್ಯೋಗ ಖಾತರಿ ಯೋಜನೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.