ಕೊಟ್ಟಾಯಂ: ಡಾ.ವಂದನಾ ಹತ್ಯೆ ವೇಳೆ ಆರೋಪಿ ಸಂದೀಪ್ ಯಾವುದೇ ಅಮಲು ಪದಾರ್ಥ ಸೇವಿಸಿರಲಿಲ್ಲ ಎಂಬುದು ದೃಢಪಟ್ಟಿದೆ.
ವಿಧಿವಿಜ್ಞಾನ ಪರೀಕ್ಷೆಯ ಫಲಿತಾಂಶವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ರಕ್ತ ಮತ್ತು ಮೂತ್ರದಲ್ಲಿ ಮಾದಕತೆಯ ಇರುವಿಕೆ ಪತ್ತೆಯಾಗಿಲ್ಲ. ಆರೋಪಿಗೆ ಯಾವುದೇ ಗಂಭೀರ ಮಾನಸಿಕ ಸಮಸ್ಯೆ ಇಲ್ಲ ಎಂದು ವೈದ್ಯಕೀಯ ಮಂಡಳಿ ತಿಳಿಸಿದೆ.
ಮೇ 10ರಂದು ಬೆಳಗ್ಗೆ ಕೊಲ್ಲಂನ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆ ವಂದನಾರನ್ನು ಚಾಕುವಿನಿಂದ ಇರಿದು ಕೊಲೆಗೈಯ್ಯಲಾಗಿತ್ತು. ಪರಿಶೀಲನೆಗೆಂದು ಪೊಲೀಸರು ಕರೆದೊಯ್ದ ಕೊಲ್ಲಂನ ಪುಯಪಲ್ಲಿ ಮೂಲದ ಸಂದೀಪ್ ಎಂಬಾತ ವೈದ್ಯರಿಗೆ ಚಾಕುವಿನಿಂದ ಇರಿದಿದ್ದಾನೆ. ದಾಳಿಯಲ್ಲಿ ಪೊಲೀಸರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯ ನಂತರ ರಾಜ್ಯದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಸರ್ಕಾರ ವೈದ್ಯಕೀಯ ಸುಗ್ರೀವಾಜ್ಞೆಯನ್ನೂ ಹೊರಡಿಸಿದೆ.