ಕಾಸರಗೋಡು: ಮಡಿಕೈ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಪ್ರವೇಶೋತ್ಸವ ಕಾಞÂರಪೋಯಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಸಸಿ ನೆಡುವ ಮೂಲಕ ಶಾಲಾ ಪ್ರವೇಶೋತ್ಸವ ಉದ್ಘಾಟಿಸಿದರು. ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಪ್ರೀತಾ ಅಧ್ಯಕ್ಷತೆ ವಹಿಸಿದ್ದರು.
ನಾಸ್ಟಾಲ್ಜಿಯಾ ಕಾರುಣ್ಯ ಸಂಗಮ ಮಡಿಕೈ, ಬಫ್ದರ್ ಹಶ್ಮಿ ಕ್ಲಬ್ ಕಾಞÂರಪೆÇಯಿ, ಶಾಲಾ ಸಿಬ್ಬಂದಿ ಸೇರಿದಂತೆ ವಿವಿಧ ಸಂಘಟನೆಗಳಿಂದ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ವಿತರಿಸಿದರು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರಮಾ ಪದ್ಮನಾಭನ್, ವಾರ್ಡ್ ಸದಸ್ಯ ಪ್ರಮೋದ್, ರತೀಶ್, ಶೈಲಜಾ, ಬಾಲಕೃಷ್ಣನ್, ತಾ.ಪಂ.ಅಧ್ಯಕ್ಷ ವಿಜಯೇಶ್,ಎಸ್ ಎಂಸಿ ಅಧ್ಯಕ್ಷ ಕುಞÂರಾಮನ್ , ಎಂಪಿಟಿಎ ಅಧ್ಯಕ್ಷ ಶ್ಯಾಮ್, ಬಿಆರ್‍ಸಿ ಸಂಯೋಜಕ ಸಜೇಶ್ , ಹಿರಿಯ ಸಹಾಯಕಿ ಸಿ.ಕೆ.ರಮ್ಯಾ ಉಪಸ್ಥಿತರಿದ್ದರು. ಪ್ರಾಚಾರ್ಯ ವೇಣುಗೋಪಾಲನ್ ಮುಂಗಾತ್ ಸ್ವಾಗತಿಸಿದರು. ಅನಿತಾ ಕುಮಾರಿ ವಂದಿಸಿದರು.