ಆಂಧ್ರಪ್ರದೇಶ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕುಟುಂಬವೊಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿ ಬಂದಿದೆ. ಇವರ ಮೈಮೇಲಿದ್ದ ಬಂಗಾರ ನೋಡಿದ ತಿರುಮಲ ಬೆಟ್ಟದಲ್ಲಿದ್ದ ಭಕ್ತರು ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ.
ಜೂನ್ 3ರಂದು ಮಹಾರಾಷ್ಟ್ರದ ರತ್ಲಾಮ್ನಿಂದ ತಿರುಪತಿ ದೇವರ ದರ್ಶನಕ್ಕೆ ಸುಭಾಷ್ ಚಂದ್ರ ಮತ್ತು ಸೋನಿ ಕುಟುಂಬ ಬಂದಿತ್ತು.
ಇವರು ಧರಿಸಿದ್ದ ಚಿನ್ನದ ಆಭರಣಗಳ ಮೇಲೆ ದೊಡ್ಡ ಬಿಲ್ಲುಗಳೊಂದಿಗೆ ವೆಂಕಟೇಶ್ವರ ಮತ್ತು ಪದ್ಮಾವತಿ ದೇವಿಯ ವಿಗ್ರಹಗಳಿದ್ದು, ತಿರುಮಲ ಬೆಟ್ಟದಲ್ಲಿದ್ದ ಭಕ್ತರ ಆಕರ್ಷಣೆಗೆ ಕಾರಣವಾಗಿತ್ತು.
ಮೈತುಂಬಾ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರದ ಒಡವೆಗಳಿಂದ ಮಿಂಚುತ್ತಿದ್ದ ಕುಟುಂಬವನ್ನು ಭಕ್ತರು ಕುತೂಲಹದಿಂದ ವೀಕ್ಷಿಸುತ್ತಿದ್ದರು. ಕೆಲವರು ತಮ್ಮ ಮೊಬೈಲ್‌ನಲ್ಲಿ ಫೋಟೋ ಸೆರೆ ಹಿಡಿದಿದ್ದಾರೆ. ಸದ್ಯ ಈ ಫೋಟೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿವೆ.
ಈ ಬಗ್ಗೆ ಮಹಾರಾಷ್ಟ್ರದಿಂದ ಬಂದಿದ್ದ ಕುಟುಂಬ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ಪ್ರತಿ ವರ್ಷ ವೆಂಕಟೇಶ್ವರನ ವಿಗ್ರಹಗಳಿರುವ ಚಿನ್ನದ ಆಭರಣ ಧರಿಸಿ ತಿರುಮಲಕ್ಕೆ ಬರುವುದು ವಾಡಿಕೆ. ಪೂರ್ವಜರ ಕಾಲದಿಂದಲೂ ತಿರುಪತಿ ವೆಂಕಟೇಶ್ವರನನ್ನು ಮನೆ ದೇವರಾಗಿ ಪೂಜಿಸುತ್ತಾ ಬಂದಿದ್ದೇವೆ. ವೆಂಕಟೇಶ್ವರ ಮತ್ತು ಪದ್ಮಾವತಿ ದೇವಿಯ ವಿಗ್ರಹಗಳಿಂದ ತಯಾರಿಸಿದ ಚಿನ್ನಾಭರಣ ಧರಿಸಿ ತಿರುಮಲ ದೇವರ ದರ್ಶನ ಮಾಡುವುದು ಪೂರ್ವಜರಿಂದ ಬಂದ ಸಂಪ್ರದಾಯ ಎಂದು ಹೇಳಿಕೊಂಡಿದ್ದಾರೆ.