ಕಾಸರಗೋಡು: ಈಗಾಗಲೇ 487 ಪ್ರದರ್ಶನಗಳನ್ನು ಕಂಡಿರುವ, ವಿಜಯ ಕುಮಾರ್ ಕೊಡಿಯಾಲ್‍ಬೈಲ್ ನಿರ್ದೇಶನದ ಶಿವದೂತೆ ಗುಳಿಗ ನಾಟಕದಲ್ಲಿ ಚಾಮುಂಡಿ ಪಾತ್ರದಲ್ಲಿ ಮಿಂಚುತ್ತಿರುವ ರಕ್ಷಿತಾ ರಾವ್ ಅವರನ್ನು ಕಾಸರಗೋಡು ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಅಮ್ಮ ಇವೆಂಟ್ ಮೆನೇಜ್‍ಮೆಂಟ್ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ಕೋಟೆಕಣಿಯ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ಕಾಸರಗೋಡು ನಗರಸಭಾ ಸದಸ್ಯೆ ಶಾರದಾ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಅಮ್ಮ ಇವೆಂಟ್ ಮೆನೇಜ್‍ಮೆಂಟ್‍ನ ಸ್ಥಾಪಕ ಕುಶಾಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ದೂರದೀವೊಡ್ಚಿ, ಬಾಯಿ ಬುಡಿಯೆ ಭಾಸ್ಕರೆ, ಸಸ್ಪೆನ್ಸ್ ಸರಸಾ, ಅವು ಪನಿಯೆರೆ ಆಪುಜಿ ಮೊದಲಾದ ನಾಟಕಗಳಲ್ಲಿ ಅಭಿನಯಿಸಿರುವ ರಕ್ಷಿತಾ ರಾವ್ ಅವರು ಅಭಿನಯಿಸಿದ ಮಣಿಕಂಠ ಮಹಿಮೆ ನಾಟಕ 27 ಪ್ರದರ್ಶನಗಳನ್ನು ಕಂಡಿದೆ.