ಪೆರ್ಲ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬಿಜೆಪಿ ಎಣ್ಮಕಜೆ ಪಂಚಾಯಿತಿ ಸಮಿತಿ ವತಿಯಿಂದ ಪೆರ್ಲದ ಶ್ರೀ ಶಂಕರ ಸದನದಲ್ಲಿ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು. ಯೋಗ ಗುರು ಪುಂಡರೀಕಾಕ್ಷ ಆಚಾರ್ಯ ಬೆಳ್ಳೂರು ಯೋಗ ತರಬೇತಿ ನಡೆಸಿದರು
ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಪುಷ್ಪಾ ಅಮೆಕ್ಕಳ, ಮಂಡಲ ಉಪಾಧ್ಯಕ್ಷ ನಾರಾಯಣ ನಾಯ್ಕ್, ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲಕುಮಾರ್, ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಉಷಾ ಗಣೇಶ್, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಪ್ರಸಾದ್, ಬಿಜೆಪಿ ಎಣ್ಮಕಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಸುಮಿತ್ ರಾಜ್, ಮುಖಂಡರಾದ ಪುನಿತ್, ಜಗದೀಶ್ ನೇತೃತ್ವ ವಹಿಸಿದ್ದರು.