ಕಾಸರಗೋಡು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕೇರಳ ಸರ್ಕಾರದ 'ಮಾಲಿನ್ಯ ಮುಕ್ತ ನವ ಕೇರಳ'ಕಾಲೇಜು ಮಟ್ಟದ ಶೂನ್ಯ ತ್ಯಾಜ್ಯ ಕ್ಯಾಂಪಸ್ ಘೋಷಣೆ ಮಾಡಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ. ಅನಂತಪದ್ಮನಾಭ ಎ.ಎಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಸರ್ಕಾರಿ ಕಾಲೇಜು ಎನ್‍ಎಸ್‍ಎಸ್ ಘಟಕದ ವತಿಯಿಂದ ಬಳಕೆಯಾಗದ ಸಾಮಗ್ರಿಗಳನ್ನು ಕಾರ್ಯಗತಗೊಳಿಸುವ ನೂತನ ಯೋಜನೆ 'ಪುನರ್ಜನಿ'ಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಸಸಿ ನೆಡುವ ಸಮಾರಂಭ ಹಾಗೂ ಸೀಡ್ ಬಾಲ್ ತಯಾರಿಕೆಯೂ ನಡೆಯಿತು. ಎನ್.ಸಿ.ಸಿ ಅಧಿಕಾರಿ ಲೆ. ಲಕ್ಷ್ಮೀ ಕೆ ಹಾಗೂ ಪಿಟಿಎ ಉಪಾಧ್ಯಕ್ಷ ಅರ್ಜುನನ್ ತಾಯಲಂಗಾಡಿ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ.ಅಶಾಲತಾ ಸಿ.ಕೆ ಸ್ವಾಗತಿಸಿದರು. ಸ್ವಯಂ ಸೇವಕ ಕಾರ್ಯದರ್ಶಿ ಕಿರಣ್ ಕುಮಾರ್ ಪಿ ವಂದಿಸಿದರು.
ಈ ಸಂದರ್ಭ ಕಾಸರಗೋಡು ಅಬಕಾರಿ ಪ್ರಿವೆಂಟಿವ್ ಅಧಿಕಾರಿ ರಘುನಾಥನ್ ಮಾದಕ ವ್ಯಸನ ಜಾಗೃತಿ ತರಗತಿ ನಡೆಸಿದರು. ಎನ್‍ಸಿಸಿ, ಪಿಟಿಎ ಮತ್ತಿತರ ಕ್ಲಬ್‍ಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಆಸಿಫ್ ಇಕ್ಬಾಲ್ ಕಾಕಶೇರಿ ಮತ್ತು ಎನ್‍ಎಸ್‍ಎಸ್ ಸ್ವಯಂಸೇವಕ ಕಾರ್ಯದರ್ಶಿಗಳಾದ ವೈಷ್ಣವಿ ವಿ, ಮೇಘಾ, ವೈಶಾಖ್ ಎ, ಅಂಜನಾ ಎಂ ಮತ್ತು ಪ್ರಸಾದ್ ಬಿ ನೇತೃತ್ವ ವಹಿಸಿದರು.