ಕಾಸರಗೋಡು: ಪರವನಡ್ಕದ ಸರ್ಕಾರಿ ವೃದ್ಧ ಸದನದ ಸದಸ್ಯರಿಗಾಗಿ ವಾಚನಾ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಯಿತು. ಸಹಾಯಕ ಜಿಲ್ಲಾಧಿಕಾರಿ ಡಾ.ಮಿಥುನ್ ಪ್ರೇಮ್ ರಾಜ್ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎ.ಸೈಮಾ ಅಧ್ಯಕ್ಷತೆ ವಹಿಸಿದ್ದರು. ಚೆಮ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕರ್ ಸಂದೇಶ ವಾಚಿಸಿದರು. ಕಾಸರಗೋಡು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿಡಾ.ಪಿ.ಪ್ರಭಾಕರ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಸಿ.ಕೆ.ಶೀಬಾ ಮುಮ್ತಾಜ್ ಪ್ರತಿಜ್ಞಾ ವಿಧಿ ವಾಚಿಸಿದರು.
ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್ ಅವರು ಪರವನಡ್ಕದಲ್ಲಿರುವ ಸರ್ಕಾರಿ ವೃದ್ಧಾಶ್ರಮದ ಗ್ರಂಥಾಲಯಕ್ಕಿರುವ ಅಗತ್ಯ ಪುಸ್ತಕಗಳನ್ನು ಸರ್ಕಾರಿ ವೃದ್ಧಾಶ್ರಮದ ಅಧೀಕ್ಷಕ ಬಿ.ಮೋಹನನ್ ಅವರಿಗೆ ಹಸ್ತಾಂತರಿಸಿದರು. ಸರ್ಕಾರಿ ವೃದ್ಧ ಸದನದ ಲೇಖಕಿ ಕುಟ್ಟಿಯಮ್ಮ ಅವರು ತಾವೇ ಬರೆದ 'ನೆರಳು' ಎಂಬ ಕವನ ವಾಚಿಸಿದರು. ವೃದ್ಧಾಶ್ರಮದ ಸದಸ್ಯೆ ಲಕ್ಷ್ಮಿ ಅವರು ಸ್ವತಃ ಸಿದ್ಧಪಡಿಸಿದ ಪುಷ್ಪಗುಚ್ಛ ನೀಡಿ ಸಹಾಯಕ ಜಿಲ್ಲಾಧಿಕಾರಿಯನ್ನು ಸ್ವಾಗತಿಸಿದರು. ಜಿಎಂಆರ್‍ಎಚ್‍ಎಸ್‍ಎಸ್ ವಿದ್ಯಾರ್ಥಿಗಳಿಂದ ಜಾನಪದ ಪ್ರದಸ್ನ ನಡೆಯಿತು. ಕಾರ್ಯಖ್ರಮದ ಅಂಗವಾಗಿ ವೃದ್ಧಸದನದ ಕೈದಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.ವೃದ್ಧ ತಾಯಂದಿರ ಕೂಟ, ವಾಚನ ಪ್ರಚಾರ, ಕವನ ವಾಚನ, ಜಿ.ಶಂಕರಪಿಳ್ಳ ಸಂಸ್ಮರಣೆಯೂ ನಡೆಯಿತು.
ಕಾಸರಗೋಡು ಬ್ಲಾಕ್ ಪಂಚಾಯಿತಿ, ಸಾಮಾಜಿಕ ನ್ಯಾಯ ಇಲಾಖೆ ಕಾಸರಗೋಡು, ಚೆಮ್ನಾಡು ಗ್ರಾಮ ಪಂಚಾಯಿತಿ, ಜಿಲ್ಲಾ ಮಾಹಿತಿ ಕಛೇರಿ, ಸಾಕ್ಷರತಾ ಮಿಷನ್, ಲೈಬ್ರರಿ ಕೌನ್ಸಿಲ್, ಕುಟುಂಬಶ್ರೀ, ಎಲ್ಲ್‍ಬಿಎಸ್ ಇಂಜಿನಿಯರಿಂಗ್ ಕಾಳೇಜು, ಜಿಎಂಆರ್‍ಎಸ್ ಎಸ್‍ಪಿಸಿ ಘಟಕ, ಜಿಎಚ್‍ಎಸ್ ಮತ್ತು ಜಿಎಚ್‍ಎಸ್‍ಎಸ್ ಚೆಮ್ನಾಡ್, ವಾಚನಾ ಸಪ್ತಾಹ ಜಿಲ್ಲಾ ಸಂಘಟನಾ ಸಮಿತಿ ಮತ್ತು ಸ್ವಯಂಸೇವಾ ಸಂಸ್ಥೆ ವತಿಯಿಂದ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.