ಶಿಲ್ಲಾಂಗ್: ಮೇಘಾಲಯದ ತುರಾದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಂಡ ಪಿಎ ಸಂಗ್ಮಾ ಫುಟ್ಬಾಲ್ ಕ್ರೀಡಾಂಗಣದ ಒಂದು ಭಾಗ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಲ್ಲಾಂಗ್: ಮೇಘಾಲಯದ ತುರಾದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಂಡ ಪಿಎ ಸಂಗ್ಮಾ ಫುಟ್ಬಾಲ್ ಕ್ರೀಡಾಂಗಣದ ಒಂದು ಭಾಗ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎ ಸಂಗ್ಮಾ ಫುಟ್ಬಾಲ್ ಕ್ರೀಡಾಂಗಣವನ್ನು ಮುಖ್ಯಮಂತ್ರಿ ಕಾನ್ರಾಡ್ ಕೆ.
'ಪಿಎ ಸಂಗ್ಮಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಫುಟ್ಬಾಲ್ ಕ್ರೀಡಾಂಗಣದ ಬಾಹ್ಯ ತಡೆಗೋಡೆಯ ಒಂದು ಭಾಗ ಕುಸಿದಿದೆ. ತುರಾ ಮತ್ತು ವೆಸ್ಟ್ ಗರೋ ಹಿಲ್ಸ್ ಪ್ರದೇಶದಲ್ಲಿ ಬಾರೀ ಮಳೆಯಿಂದಾಗಿ ಹಾನಿ ಉಂಟಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ನೀಡಿದೆ.
'ತಡೆಗೋಡೆಯ ಭಾಗ ಕುಸಿದಿರುವುದಕ್ಕೆ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ. ಪಶ್ಚಿಮ ಗರೋ ಹಿಲ್ಸ್‌ನ ಉಪ ಆಯುಕ್ತರು, ಘಟನೆಯ ಬಗ್ಗೆ ಅಧಿಕೃತ ತನಿಖೆಯನ್ನು ಪ್ರಾರಂಭಿಸಿದ್ದಾರೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಘಾಲಯ ವಿಧಾನಸಭೆ ಕಟ್ಟಡದ ಒಂದು ಭಾಗ ಕುಸಿದಿತ್ತು. ₹177.7 ಕೋಟಿ ವೆಚ್ಚದ ಕಟ್ಟಡದ 70 ಟನ್ ತೂಕದ ಗುಮ್ಮಟ ಕುಸಿದು ಬಿದ್ದಿದ್ದು, ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.