ತಿರುವನಂತಪುರ: ಲೈಫ್ ಮಿಷನ್ ಗುತ್ತಿಗೆ ಲಂಚ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ನ್ಯಾಯಾಲಯದ ಸಮನ್ಸ್ ಪ್ರಕಾರ ಸ್ವಪ್ನಾ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಸ್ವಪ್ನಾಗೆ ಜಾಮೀನು ನೀಡಬಾರದು ಎಂದು ಇ.ಡಿ ಆಗ್ರಹಿಸಿತ್ತು. ಜಾಮೀನು ನೀಡಿದರೆ ಆರೋಪಿ ಅದೇ ಅಪರಾಧವನ್ನು ಪುನರಾವರ್ತಿಸುವ ಸಾಧ್ಯತೆಯಿದೆ ಎಂದು ಇ.ಡಿ. ನ್ಯಾಯಾಲಯದಲ್ಲಿ ವಾದಿಸಿದೆ.
ಆದರೆ, ಜಾಮೀನು ನೀಡುವಂತೆ ಸಪ್ನಾ ಮಾಡಿದ ಮನವಿಯನ್ನು ಕೋರ್ಟ್ ಅಂಗೀಕರಿಸಿದೆ. ಪ್ರಕರಣದ ಇತರ ಆರೋಪಿಗಳಾದ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಹಾಗೂ ಮತ್ತೋರ್ವ ಆರೋಪಿ ಸಂದೀಪ್ ಅವರ ಬಂಧನ ಅವಧಿಯನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಈ ರಿಮಾಂಡ್‍ನಲ್ಲಿರುವ ಆರೋಪಿಗಳನ್ನು ಆನ್‍ಲೈನ್‍ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಹೈಕೋರ್ಟ್ ನಿರ್ದೇಶನದಂತೆ ಸಂತೋಷ್ ಈಪನ್ ಪಾಸ್ ಪೋರ್ಟ್ ಬಿಡುಗಡೆ ಮಾಡುವಂತೆಯೂ ಕೋರ್ಟ್ ಸೂಚಿಸಿದೆ. ಪ್ರಕರಣದ ಮೂರನೇ ಆರೋಪಿ ಸರಿತ್ ನ ಜಾಮೀನು ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದೆ. ಮಾಹಿತಿ ಲಭಿಸಬೇಕಷ್ಟೆ.