HEALTH TIPS

ಹಾಸ್ಟೆಲ್​ಗೆ ನುಗ್ಗಿ ಹುಡುಗಿಯರ ಜತೆ ಮಲಗಲು ಯತ್ನಿಸಿದ ಯುವಕ: ನಂತರ ನಡೆದಿದ್ದಿಷ್ಟು.

              ಕೊಚ್ಚಿ: ವಿದ್ಯಾರ್ಥಿನಿಯರ ಹಾಸ್ಟೆಲ್​ ಒಳಗಡೆ ಅತಿಕ್ರಮ ಪ್ರವೇಶ ಮಾಡಿ ಹುಡುಗಿಯರ ಜತೆ ಮಲಗಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ತೋಡಪುಳದಲ್ಲಿ ನಡೆದಿದೆ.

                 ಬಂಧಿತ ಯುವಕನನ್ನು 23 ವರ್ಷದ ಅಖಿಲ್​ ಎಂದು ಗುರುತಿಸಲಾಗಿದೆ.

ಈತ ಅರಕ್ಕುಲಂ ಗ್ರಾಮದ ನಿವಾಸಿ. ಬುಡಕಟ್ಟು ಹುಡುಗಿಯರ ವಸತಿ ನಿಲಯದಲ್ಲಿ ಜೂನ್​ 15ರ ಬೆಳಗಿನ ಜಾವ ಈ ಘಟನೆ ನಡೆದಿದೆ.

                ಹಾಸ್ಟೆಲ್​ ಪ್ರವೇಶಿಸಿ ಅಖಿಲ್​, ಹುಡುಗಿಯರ ಪಕ್ಕದಲ್ಲಿ ಹೋಗಿ ಮಲಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ನೋಡಿದ ಹುಡುಗಿಯರು ಗಾಬರಿಗೆ ಒಳಗಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಇದರಿಂದ ಭಯಗೊಂಡ ಅಖಿಲ್​ ಅಲ್ಲಿಂದ ಪರಾರಿಯಾಗಿದ್ದ.

                 ಪ್ರಕರಣ ದಾಖಲಾದ ಬಳಿಕ ಸಿಸಿಟಿವಿ ದೃಶ್ಯಾವಳಿ ನೆರವಿನೊಂದಿಗೆ ಆರೋಪಿ ಅಖಿಲ್​ನನ್ನು ಕಂಜಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಖಿಲ್​ ಓರ್ವ ಬಸ್​ ಕ್ಲೀನರ್​ ಆಗಿ ಕೆಲಸ ಮಾಡುತ್ತಿದ್ದ. ಪೂಮಲಾ-ಮುವಾಟ್ಟುಪುಳ ಮಾರ್ಗವಾಗಿ ಸಂಚರಿಸುವ ಬಸ್‌ನ ಕ್ಲೀನರ್. ವರದಿಗಳ ಪ್ರಕಾರ ಈತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries