ಪೆರ್ಲ: ತರಗತಿ ಕೊಠಡಿಯಲ್ಲಿ ಕಲಿಯುವ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಾಗ ಪ್ರತಿಭಾಶಾಲಿಗಳಾಗಿ ಬೆಳೆಯುತ್ತೇವೆ. ಪುಸ್ತಕಗಳನ್ನು ಇಷ್ಟಪಡೋಣ ಅದು ನಮ್ಮ ಬಾಳಿಗೆ ಬೆಳಕಾಗುತ್ತದೆ ಎಂದು ಕವಯತ್ರಿ ದಿವ್ಯ ಗಟ್ಟಿ ಪರಕ್ಕಿಲ ತಿಳಿಸಿದರು.
ಪೆರ್ಲ ಎಸ್ ಎನ್ ಎ ಎಲ್ ಪಿ ಶಾಲೆಯಲ್ಲಿ ಆಯೋಜಿಸಿದ ವಾಚನಾ ಮಾಸಿಕ ಕಾರ್ಯಕ್ರಮದ ವಿಶೇಷ ಆಕರ್ಷಣೆಯ 'ಪುಸ್ತಕ ಮನೆ' ಉದ್ಘಾಟಿಸಿ ಮಕ್ಕಳ ಜೊತೆ ಹಾಡು ಕಥೆಗಳೊಂದಿಗೆ ಮನರಂಜಿಸಿ ಅವರು ಮಾರ್ಗದರ್ಶನ ನೀಡಿದರು.
ಪುಸ್ತಕ ಮನೆ ಎನ್ನುವುದು ಮಕ್ಕಳ ವಾಚನಾವನ್ನು ಪೆÇ್ರೀತ್ಸಾಹಿಸುವ ಶೈಕ್ಷಣಿಕ ಶಾಲಾ ಯೋಜನೆ. ಕಾಸರಗೋಡು ಜಿಲ್ಲೆಯ ಬರಹಗಾರರ ಪುಸ್ತಕಗಳು ಹಾಗೂ ಮಕ್ಕಳ ಸಾಹಿತ್ಯ ಕಥೆ ಕವಿತೆ ಲೇಖನ ಕನ್ನಡ ಸಾಹಿತ್ಯದ ಉದಯೋನ್ಮುಖ ಬರಹಗಳ ಪುಸ್ತಕಗಳು ಇರುತ್ತದೆ. ವಾರಾಂತ್ಯಕ್ಕೆ 10 ಪುಸ್ತಕಗಳು. ಆಯ್ಕೆಯಾದ ಪುಸ್ತಕಗಳ ಓದಿನ ಮೇಲೆ 'ವೀಕ್ ಎಂಡ್ ಕ್ವಿಜ್ ' ಸ್ಪರ್ಧೆ ಆಯೋಜಿಸಿ ಮಕ್ಕಳ ಪುಸ್ತಕ ಓದಿನ ಆಸಕ್ತಿಯನ್ನು ಪ್ರೋತ್ಸಾಹಿಸುವುದು.
ಪಿಟಿಎ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಕಾಕುಂಜೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಪ್ರಸ್ತಾವಿಕವಾಗಿ ಮಾತಾನಾಡಿದರು. ಸಾಹಿತಿ ಸುಂದರ ಬಾರಡ್ಕ, ಶಾಲಾ ನಾಯಕಿ ಸನ ಎಂ.ಪಿ. ಉಪಸ್ಥಿತರಿದ್ದರು. ಶಿಕ್ಷಕ ಉದಯ ಸಾರಂಗ ಸ್ವಾಗತಿಸಿ, ಸಂಧ್ಯಾ ಎನ್ ವಂದಿಸಿದರು.