ಬದಿಯಡ್ಕ: ನೀರ್ಚಾಲು ಸಮೀಪದ ಕಿಳಿಂಗಾರು ಯಶಸ್ವಿನಿ ಕೆ. ಐಐಐಟಿ (ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ) ಹೈದರಾಬಾದ್ ಪದವಿಪೂರ್ವ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ೧ನೇ ರ್‍ಯಾಂಕ್ ಪಡೆದಿರುತ್ತಾಳೆ.
ದಕ್ಷಿಣ ಭಾರತದಲ್ಲಿ ಇಂತಹ ಸಾಧನೆಯನ್ನು ಮಾಡಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆ ಈಕೆಯ ಪಾಲಿಗಿದೆ. ಕುಂಬಳೆ ಸೀಮೆಯ ಪ್ರಸಿದ್ಧ ಕಿಳಿಂಗಾರು ವೈದಿಕ ಮನೆತನದಲ್ಲಿ ಜನಿಸಿದ ಈಕೆಯ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದೆ. ಕಿಳಿಂಗಾರು ವೇದಮೂರ್ತಿ ಶಿವಶಂಕರ ಭಟ್ ಹಾಗೂ ಶಶಿಪ್ರಭಾ ದಂಪತಿಗಳ ಹಿರಿಯ ಪುತ್ರಿಯಾದ ಈಕೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೇಳ ಶಾಲೆಯಲ್ಲಿ, ಹೈಸ್ಕೂಲು ವಿದ್ಯಾಭ್ಯಾಸವನ್ನು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಕಲಿತಿದ್ದಳು. ಪ್ರಸ್ತುತ ಮಂಗಳೂರು ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿರುತ್ತಾಳೆ. ೧೦ನೇ ತರಗತಿಯಲ್ಲಿಯೂ ಈಕೆ ನೂರು ಶೇಕಡಾ ಅಂಕ ಪಡೆದಿದ್ದಳು.