ಕಾಸರಗೋಡು: ವೆಸ್ಟ್ ಎಳೇರಿ ಗ್ರಾಮ ಪಂಚಾಯಿತಿ ಕೃಷಿ ಭವನ ಹಾಗೂ ಜಿಲ್ಲಾ ಮಣ್ಣು ತಪಾಸಣಾ ಪ್ರಯೋಗಾಲಯದ ಸಂಯುಕ್ತ ಆಶ್ರಯದಲ್ಲಿ ಮಣ್ಣು ಪರೀಕ್ಷಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಣ್ಣಿನ ತಪಾಸಣೆಯೊಂದಿಗೆ ಗೊಬ್ಬರ, ಪೋಷಕಾಂಶ ಒದಗಿಸುವಿಕೆ ಸೇರಿದಂತೆ ಮಣ್ಣಿನ ಸಂರಕ್ಷಣೆ ನಡೆಸುವ ನಿಟ್ಟಿನಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ವೆಸ್ಟ್ ಎಳೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ ಮೋಹನನ್ ಪಂಚಾಐಇತಿ ಮಟ್ಟದ ಮಣ್ಣು ತಪಾಸಣಾ ಕಾರ್ಯ ಉದ್ಘಾಟಿಸಿದರು. ಉಪಾಧ್ಯಕ್ಷಪಿ.ಸಿ.ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಣ್ಣು ಪರಿಶೋಧನಾ ಇಲಾಖೆ ಸಹಾಯಕ ವಿಜ್ಞಾನಿ ನಿಶಾಭಾಯಿ ಮಣ್ಣು ಪರೀಕ್ಷೆ ನಡೆಸಿದರು. ವೆಸ್ಟ್ ಎಳೇರಿ ಗ್ರಾ.ಪಂ ಕಾರ್ಯದರ್ಶಿ ಸಿ.ಕೆ.ಪಂಕಜಾಕ್ಷನ್, ಸ್ಥಾಯಿ ಸಮಿತಿ ಅಧ್ಯಕ್ಷರು ಸಿ.ವಿ.ಅಖಿಲಾ, ಕೆ.ಕೆ.ತಂಗಚನ್ ಸದಸ್ಯ ಸಿ.ಪಿ.ಸುರೇಶನ್ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಟಿ.ವಿ.ರಾಜೀವನ್ ಸ್ವಾಗತಿಸಿದರು.