ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಸೇವಾ ಕೌಂಟರ್‍ನಲ್ಲಿ ಹೊಸದಾಗಿ ಅಳವಡಿಸಲಾದ ಶುದ್ಧೀಕೃತ ಕುಡಿಯುವ ನೀರಿನ ಘಟಕವನ್ನು ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣರಾಜ ವರ್ಮ ರಾಜ ಉದ್ಘಾಟಿಸಿದರು. ಕಾಸರಗೋಡಿನ ಪ್ರಸಿದ್ಧ ವಜ್ರೋದ್ಯಮಿ ಭೀಮ ಗೋಲ್ಡ್ ಅಂಡ್ ಡೈಮೊಂಡ್ಸ್ ಪ್ರಯೋಜಕತ್ವದಲ್ಲಿ ಶುದ್ಧೀಕರೆಣ ಘಟಕ ಸ್ಥಾಪಿಸಲಾಗಿದೆ. ಜ್ಯುವೆಲ್ಲರಿಯ ಷೋರೂಮ್ ಪ್ರಬಂಧಕ ಗೋಪ ಕುಮಾರ್, ದೇಗುಲದ ಹಿರಿಯ ಅಧಿಕಾರಿ ಬಿ.ಎನ್. ಸುಬ್ರಹ್ಮಣ್ಯ, ಕೆ ಶ್ರೀಕೃಷ್ಣ, ಕೆ.ಎಸ್. ಮಧ್ಯಸ್ಥ, ಸಹಾಯಕ ಅರ್ಚಕ ಕೃಷ್ಣಪ್ರಸಾದ್ ಅಡಿಗ, ನವೀಕರಣ ಸಮಿತಿಯ ಮುರಳಿ ಗಟ್ಟಿ ಪರಕ್ಕಿಲ ಹಾಗೂ ಭಕ್ತ ಜನರು ಪಾಲ್ಗೊಂಡಿದ್ದರು.