ತಿರುವನಂತಪುರಂ: ಚಲಚಿತ್ರ ತಾರಾ ಸಂಘಟನೆ ‘ಅಮ್ಮ’ ಸಂಘಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ರಾಜೀನಾಮೆ ನೀಡಬೇಡಿ ಎಂದು ಕೇಳಿದ ಮೊದಲ ವ್ಯಕ್ತಿ ನಟ ಸುರೇಶ್ ಗೋಪಿ ಎಂದು ಹರೀಶ್ ಪೆರಾಡಿ ಹೇಳಿದ್ದಾರೆ.
ಅನಿರೀಕ್ಷಿತವಾಗಿ ಸುರೇಶ್ ಗೋಪಿ ಅವರ ಪೋನ್ ಕರೆ ಬಂದಿದೆ ಎಂದು ಆನ್ ಲೈನ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹರೀಶ್ ಪೆರಾಡಿ ಹೇಳಿದ್ದಾರೆ.
ಸಂಸ್ಥೆಗೆ ಸಂಬಂಧಿಸಿದಂತೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ರಾಜೀನಾಮೆ ಹಿಂಪಡೆಯುವ ಯೋಚನೆ ಇಲ್ಲ. ಸಂಸ್ಥೆಯ ದುರಸ್ಥಿಯ ಅಗತ್ಯವಿದೆ ಎಂದು ಅವರು ಹೇಳಿದರು.
ಅಮ್ಮದ ಅಧ್ಯಕ್ಷರೂ ಆಗಿರುವ ಮೋಹನ್ ಲಾಲ್ ಅವರು ಅಮ್ಮ ಸಂಘಟನೆಯಿಂದ ನಾನು ಹೊರಗಿದ್ದರೂ ತಮ್ಮ ಚಿತ್ರಗಳಿಗೆ ಆಹ್ವಾನಿಸುತ್ತಾರೆ. ಮೋಹನ್‍ಲಾಲ್ ಅವರು ಸಂಘಟನೆಯೊಂದಿಗಿನ ಎಲ್ಲಾ ಭಿನ್ನಾಭಿಪ್ರಾಯಗಳಿಂದ ನನ್ನನ್ನು ದೂರವಿಟ್ಟರೂ ನನ್ನಲ್ಲಿರುವ ನಟನನ್ನು ಒಪ್ಪಿಕೊಳ್ಳುವ ವ್ಯಕ್ತಿ. ಅದು ಅವರ ಗುಣ ಎಂದೂ ಹರೀಶ್ ಪೆರಾಡಿ ಹೇಳಿದರು.