HEALTH TIPS

ರಕ್ಷಣಾ ಕ್ಷೇತ್ರದಲ್ಲಿ ಭಾರತ -ಅಮೆರಿಕ ಸಹಭಾಗಿತ್ವ

               ವದೆಹಲಿ : ಸೇನಾ ಪರಿಕರಗಳು, ಹಾರ್ಡ್‌ವೇರ್‌ಗಳ ಅಭಿವೃದ್ಧಿ, ವಿವಿಧ ಯೋಜನೆಗಳಿಗೆ ಉನ್ನತ ಆದ್ಯತೆ ನೀಡುವುದು ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಜಂಟಿ ಸಹಭಾಗಿತ್ವ ಕುರಿತು ಭಾರತ ಮತ್ತು ಅಮೆರಿಕ ನೀಲನಕ್ಷೆ ರೂಪಿಸಿವೆ.

                ಉಕ್ರೇನ್‌-ರಷ್ಯಾ ಘರ್ಷಣೆ ಹಾಗೂ ಗಡಿಯಲ್ಲಿ ಚೀನಾದ ಬಲವೃದ್ಧಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

                ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಯ ಎರಡು ವಾರ ಮೊದಲು ಇದು ಕಾರ್ಯಗತಗೊಂಡಿದೆ.

                  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕದ ರಕ್ಷಣಾ ಇಲಾಖೆ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‌ ಅವರ ನಡುವೆ ಇಲ್ಲಿ ನಡೆದ ಮಾತುಕತೆಯ ವೇಳೆ ನೀಲನಕ್ಷೆಗೆ ಅಂತಿಮರೂಪವನ್ನು ನೀಡಲಾಯಿತು.

                  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಟಿನ್ ಅವರು, 'ಇಂಡೊ-ಪೆಸಿಫಿಕ್‌ ವಲಯವನ್ನು ಮುಕ್ತಗೊಳಿಸಲು ಹಾಗೂ ಎರಡು ಬಲಶಾಲಿ ರಾಷ್ಟ್ರಗಳ ನಡುವಿನ ತಾಂತ್ರಿಕ ಅನ್ವೇಷಣೆ ಮತ್ತು ಸೇನಾ ಸಹಕಾರ, ಜಗದ ಒಳಿತಿಗೆ ಹೇಗೆ ಶಕ್ತಿಯಾಗಬಹುದು ಎಂಬುದನ್ನು ನಿರೂಪಿಸಲು ಈ ಸಹಭಾಗಿತ್ವವು ಉದಾಹರಣೆ ಆಗಲಿದೆ' ಎಂದು ಹೇಳಿದರು.

               'ಜಗತ್ತು ತೀವ್ರತರದಲ್ಲಿ ಬದಲಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಚೀನಾದ ದಬ್ಬಾಳಿಕೆ, ಉಕ್ರೇನ್‌ ಮೇಲೆ ರಷ್ಯಾದ ಅತಿಕ್ರಮಣ ಮತ್ತೆ ಗಡಿರೇಖೆಯನ್ನು ನಿಗದಿಪಡಿಸಬೇಕಾದ ಅಗತ್ಯ ಪ್ರತಿಪಾದಿಸಿದೆ. ರಾಷ್ಟ್ರೀಯ ಭದ್ರತೆಗೂ ಧಕ್ಕೆ ತಂದಿದೆ. ಇಂತಹ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕದ ಸಹಭಾಗಿತ್ವವು ಮಹತ್ವದ್ದಾಗಲಿದೆ' ಎಂದು ಅಭಿಪ್ರಾಯಪಟ್ಟರು.

            ಯುದ್ಧ ವಿಮಾನಗಳ ಎಂಜಿನ್ ತಯಾರಿಕೆಯ ತಂತ್ರಜ್ಞಾನವನ್ನು ಭಾರತದ ಜೊತೆಗೆ ವಿನಿಮಯ ಮಾಡಿಕೊಳ್ಳುವ ಜನರಲ್‌ ಎಲೆಕ್ಟ್ರಿಕ್‌ (ಜಿ.ಇ) ಪ್ರಸ್ತಾವ ಕುರಿತು ಉಭಯ ನಾಯಕರು ಚರ್ಚಿಸಿದರು. ಅಮೆರಿಕದ ಜನರಲ್‌ ಅಟೊಮಿಕ್ಸ್‌ ಏರೋನಾಟಿಕಲ್‌ ಸಿಸ್ಟಮ್ಸ್‌ ಸಂಸ್ಥೆ ಯಿಂದ 30 ಎಂಕ್ಯೂ-9ಬಿ ಹೆಸರಿನ ಶಸ್ತ್ರಸಜ್ಜಿತ ಡ್ರೋನ್‌ ಖರೀದಿಸಲು ಭಾರತ ಉದ್ದೇಶಿಸಿದೆ.

               ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಭಾಲ್‌ ಅವರ ಜೊತೆಗೂ ಆಸ್ಟಿನ್‌ ಪ್ರತ್ಯೇಕವಾಗಿ ಚರ್ಚಿಸಿದರು. ಮೋದಿ ಅವರ ಅಮೆರಿಕ ಭೇಟಿ ವೇಳೆ ಕೆಲವು ಯೋಜನೆಗಳ ಕುರಿತ ಚರ್ಚೆ ಸ್ಪಷ್ಟ ರೂಪ ಪಡೆಯಬಹುದು ಎಂದು ಆಸ್ಟಿನ್ ವಿಶ್ವಾಸ ವ್ಯಕ್ತಪಡಿಸಿದರು.

               'ಜಂಟಿ ಸಹಭಾಗಿತ್ವದಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿ, ಉತ್ಪಾದನೆಗೆ ಅವಕಾಶಗಳನ್ನು ಗುರುತಿಸಲಾಗಿದೆ. ಉಭಯ ದೇಶಗಳಲ್ಲಿ ರಕ್ಷಣಾಕ್ಷೇತ್ರದ ಸ್ಟಾರ್ಟ್‌ಅಪ್‌ ಕುರಿತು ಸಹಭಾಗಿತ್ವ ಹೊಂದಲಾಗುವುದು' ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries