ಕಾಸರಗೋಡು: ಅಂತರಾಷ್ಟ್ರೀಯ ಒಲಿಂಪಿಕ್ ದಿನಾಚರಣೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ವತಿಯಿಂದ ಸಾಮೂಹಿಕ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಕಾಸರಗೋಡಿನಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಓಟವನ್ನು ಕಾಸರಗೋಡು ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ. ಹಬೀಬ್ ರಹಿಮಾನ್ ಧ್ವಜ ತೋರಿಸುವ ಮೂಲಕ ಉದ್ಘಾಟಿಸಿದರು. ರಾಜ್ಯ ಕ್ರೀಡಾ ಪರಿಷತ್ ಸದಸ್ಯ ಟಿ.ವಿ. ಬಾಲನ್ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಕ್ರೀಡಾ ಮಂಡಳಿ ಪದಾಧಿಕಾರಿಗಳು, ಕ್ರೀಡಾ ತಾರೆಗಳು, ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.