HEALTH TIPS

ಓಮೈಕ್ರಾನ್‌ ಕೇಂದ್ರಿತ ಬೂಸ್ಟರ್‌ ಲಸಿಕೆ ಬಿಡುಗಡೆ

             ವದೆಹಲಿ: ಕೊರೊನ ವೈರಸ್‌ ಉಪತಳಿ ಓಮೈಕ್ರಾನ್‌ ಕೇಂದ್ರಿತವಾಗಿ ಅಭಿವೃದ್ಧಿಪಡಿಸಲಾಗಿರುವ ಎಂಆರ್‌ಎನ್‌ಎ ಆಧರಿತ ಕೋವಿಡ್‌ ಬೂಸ್ಟರ್‌ ಲಸಿಕೆ 'ಜೆಮ್‌ಕೋವ್ಯಾಕ್‌-ಒಎಂ' ಅನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಶನಿವಾರ ಬಿಡುಗಡೆ ಮಾಡಿದರು.

              ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಕಾರ ಮಂಡಳಿ (ಬಿಐಆರ್‌ಎಸಿ) ಸಹಕಾರದೊಂದಿದೆ ಜೆನ್ನೊವಾ ಸಂಸ್ಥೆಯು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ದೇಶೀಯ ತಂತ್ರಜ್ಞಾನ ಬಳಿಸಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಭಾರತೀಯ ಎಂಆರ್‌ಎನ್‌ಎ ಆಧರಿತ ಲಸಿಕೆ ಇದಾಗಿದೆ.

             ತುರ್ತು ಸಂದರ್ಭಗಳಲ್ಲಿ ಬಳಸಲು ಈ ಲಸಿಕೆಗೆ ಭಾರತೀಯ ಔಷದ ನಿಯಂತ್ರಣ ಮಹಾ ನಿರ್ದೇಶಕರ (ಡಿಸಿಜಿಐ) ಕಚೇರಿಯು ಕೆಲ ದಿನಗಳ ಹಿಂದಯಷ್ಟೇ ಅನುಮತಿ ನೀಡಿತ್ತು.

               ಕೋವಿಡ್‌- 19 ಲಸಿಕೆಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಆತ್ಮನಿರ್ಭರ ಭಾರತ 3.0 ಪ್ಯಾಕೇಜ್ ಅಡಿ ಕೋವಿಡ್‌ ಸುರಕ್ಷಾ ಯೋಜನೆಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾದ ಐದನೇ ಲಸಿಕೆ 'ಜೆಮ್‌ಕೋವ್ಯಾಕ್‌-ಒಎಂ' ಆಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries