ನವದೆಹಲಿ (PTI): ಗಾಲ್ವನ್ ಕಣಿವೆಯಲ್ಲಿ ಚೀನಾದೊಂದಿಗೆ ಸಂಘರ್ಷ ನಡೆದ ನಂತರ, ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಗುಂಟ ಅಂದಾಜು 3,500 ಕಿ.ಮೀ. ಉದ್ದಕ್ಕೂ ಭಾರತವು ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ಬುಧವಾರ ಹೇಳಿವೆ.

ಮಿಲಿಟರಿ ಮೂಲಸೌಕರ್ಯ, ಕಣ್ಗಾವಲು ವ್ಯವಸ್ಥೆ ಹಾಗೂ ಯುದ್ಧ ಸನ್ನದ್ಧತೆಯ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಮೂಲಸೌಕರ್ಯ ವಿಷಯದಲ್ಲಿ ಈ ಪ್ರದೇಶದಲ್ಲಿದ್ದ ಕೊರತೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.
ಲಡಾಖ್ ಗಡಿಯಲ್ಲಿರುವ ಗಾಲ್ವನ್ ಕಣಿಯಯಲ್ಲಿ 2020ರ ಜೂನ್ 15ರಂದು ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಈ ಸಂಘರ್ಷಕ್ಕೆ ಮೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಗಡಿಯಲ್ಲಿ ಹೆಲಿಪ್ಯಾಡ್‌ಗಳು, ಸೇತುವೆಗಳು,ಸುರಂಗ ಮಾರ್ಗಗಳು, ಯೋಧರು ತಂಗಲು ವ್ಯವಸ್ಥೆ ಸೇರಿದಂತೆ ಸೇನಾಪಡೆಗಳಿ ಅಗತ್ಯವಿರುವ ಸೌಕರ್ಯಗಳ ನಿರ್ಮಾಣಕ್ಕೆ ಈ ಮೂರು ವರ್ಷಗಳ ಅವಧಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.