HEALTH TIPS

ಹದಿ ಹರೆಯದ ಮಕ್ಕಳನ್ನು ಒತ್ತಡ ಮುಕ್ತರನ್ನಾಗಿಸೋದು ಹೇಗೆ?

 ಒತ್ತಡ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಮನುಷ್ಯ ಎಂದ ಮೇಲೆ ಆತನ ಜೀವನದಲ್ಲಿ ಸಾಮಾಸ್ಯೆಗಳು ಕಾಮನ್. ಇದರಿಂದ ಒತ್ತಡ ಕೂಡ ತನ್ನಿಂದ ತಾನೇ ಹೆಚ್ಚಾಗುತ್ತದೆ. ಅದೇ ರೀತಿ ಹದಿಹರೆಯದ ಮಕ್ಕಳಿಗೂ ಕೂಡ ಅವರದ್ದೇ ಆದ ಒತ್ತಡಗಳು ಇರುತ್ತದೆ. ಕೆಲವೊಂದು ಸಲ ಪೋಷಕರ ಅತಿಯಾದ ನಿರೀಕ್ಷೇಗಳು ಮಕ್ಕಳನ್ನು ಧರ್ಮ ಸಂಕಟಕ್ಕೆ ಸಿಲುಕುವ ಹಾಗೆ ಮಾಡುತ್ತದೆ.

ಪ್ರತಿಯೊಬ್ಬ ಪೋಷಕರಿಗೆ ತಮ್ಮ ಮಕ್ಕಳು ಎಲ್ಲದರಲ್ಲೂ ಮೊದಲಿಗರಾಗಿ ಇರಬೇಕು ಅನ್ನೋ ಆಸೆ ಖಂಡಿತ ಇರುತ್ತದೆ. ಅವರ ಆಸೆ, ಬಯಕೆಗಳನ್ನು ಮಕ್ಕಳ ಮೇಲೆ ಹೇರಿದಾಗ ಮಕ್ಕಳು ಒತ್ತಡಕ್ಕೆ ಸಿಲುಕಿ ಖಿನ್ನತೆಗೆ ಒಳಗಾಗೋದು ಸಾಮಾನ್ಯ. ಅಷ್ಟಕ್ಕು ಹದಿಹರೆಯದ ಮಕ್ಕಳ ಒತ್ತಡ ಕಡಿಮೆ ಮಾಡೋದು ಹೇಗೆ? ಅವರನ್ನು ಒತ್ತಡದಿಂದ ಹೊರ ತರಲು ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.

1. ಸಮಯ ನಿಭಾಯಿಸುತ್ತಾ, ಗುರಿ ತಲುಪೋದನ್ನು ಹೇಳಿಕೊಡಿ

ವಿದ್ಯಾರ್ಥಿಗಳಿಗೆ ಸಮಯವನ್ನು ನಿಭಾಯಿಸೋದು ಹೇಗೆ ಅನ್ನೋದು ಗೊತ್ತಿರಬೇಕು. ಆದರೆ ಕೆಲವೊಂದು ಸಲ ಅವರು ಜೀವನವನ್ನು ಅತಿಯಾಗಿ ಎಂಜಾಯ್ ಮಾಡುತ್ತಾ, ಗುರಿ ತಲುಪೋದನ್ನು ಮರೆತು ಬಿಡ್ತಾರೆ. ಈ ರೀತಿ ಸಮಯವನ್ನು ವ್ಯರ್ಥ ಮಾಡುತ್ತಾರೆ. ಈ ಮಧ್ಯೆ ಅವರಿಗೆ ವಿಧ್ಯಾಭ್ಯಾಸಕ್ಕೆ ಸಮಯ ಕೊಡೋದಿಕ್ಕೆ ಆಗದೇ ಸೋತು ಹೋಗುತ್ತಾರೆ. ಒಂದು ಕಡೆಯಿಂದ ಪೋಷಕರು ನಿರೀಕ್ಷೇಗಳನ್ನು ಪೂರೈಸೋಕ್ಕೆ ಆಗೋದಿಲ್ಲ. ಹೀಗಾಗಿ ಪೋಷಕರು ಮೊದಲು ತಮ್ಮ ಮಕ್ಕಳಿಗೆ ಸಮಯವನ್ನು ನಿಭಾಯಿಸೋದು ಹೇಗೆ ಅನ್ನೋದನ್ನು ಹೇಳಿಕೊಡಿ.

2. ಸ್ಪರ್ಧಾ ಜಗತ್ತಿನ ಬಗ್ಗೆ ಅರಿವು ಮೂಡಿಸಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಅನ್ನೋದು ಇದ್ದೇ ಇರುತ್ತದೆ. ಕೆಲವೊಂದು ಸಲ ಮಕ್ಕಳು ಸ್ಪರ್ಧೆಗೆ ಹೆದರಿ ಹೋಗುತ್ತಾರೆ. ತರಗತಿಯಲ್ಲಿ ಮೊದಲ ಸ್ಥಾನ ಬಂದಿಲ್ಲ ಅನ್ನೋ ಕಾರಣಕ್ಕೆ ಒತ್ತಡಕ್ಕೆ ಸಿಲುಕುತ್ತಾರೆ. ಪೋಷಕರು ಇದಕ್ಕೆ ಅವಕಾಶವನ್ನು ಕೊಡಬಾರದು. ಮಕ್ಕಳಲ್ಲಿ ಸ್ಫೂರ್ತಿ ತುಂಬಬೇಕು. ಮೊದಲನೇ, ಎರಡನೇ ಸ್ಥಾನ ಗಳಿಸೋದು ಮುಖ್ಯವಲ್ಲ. ಎಷ್ಟು ಪ್ರಯತ್ನ ಪಟ್ಟಿದ್ದೀಯಾ ಅನ್ನೋದು ಮುಖ್ಯ ಎಂದು ಮಕ್ಕಳಿಗೆ ಹೇಳಿ ಕೊಡಿ.

3. ಮಕ್ಕಳ ಜೊತೆಗೆ ಆಟವಾಡಿ, ಸಮಯ ಕಳೆಯಿರಿ

ಹದಿ ಹರೆಯದ ಮಕ್ಕಳ ಮನಸ್ಸು ಚಂಚಲವಾಗಿರುತ್ತದೆ. ಹೀಗಾಗಿ ಪೋಷಕರು ಆದಷ್ಟು ಮಕ್ಕಳ ಜೊತೆಗೆ ಸ್ನೇಹಿತರಂತೆ ವರ್ತಿಸಬೇಕು. ಮೂರು ಹೊತ್ತು ಓದು ಎಂದು ಅವರ ತಲೆ ತಿನ್ನಬೇಡಿ. ಬದಲಾಗಿ ಓದೋ ಸಮಯದಲ್ಲಿ ಮಾತ್ರ ಓದಲಿ. ಇನ್ನೂ ನೀವು ಫ್ರೀಯಾಗಿ ಇದ್ದಾಗ ಮಕ್ಕಳ ಜೊತೆಗೆ ಹೊರಗಡೆ ಹೋಗಿ ಆಟವಾಡಿ ಇದರಂದ ಅವರ ಮನಸ್ಸಿಗೆ ಖುಷಿಯಾಗುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾದಿಂದಲೂ ಆದಷ್ಟು ದೂರವಿರುತ್ತಾರೆ.

4. ಯೋಗ, ವ್ಯಾಯಾಮ ಮಾಡಿಸಿ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯ ಕೂಡ ಅಷ್ಟೇ ಮುಖ್ಯವಾಗುತ್ತದೆ. ವಿದ್ಯಾಭ್ಯಾಸದ ಕಡೆಗೆ ಮಕ್ಕಳು ಹೆಚ್ಚು ಆಸಕ್ತಿ ನೀಡಿದಂತೆ ಅವರಲ್ಲಿ ಒತ್ತಡ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಮಕ್ಕಳ ಜೊತೆಗೆ ಪೋಷಕರು ವ್ಯಾಯಾಮ ಸೇರಿದಂತೆ ಯೋಗ, ಧ್ಯಾನ ಮಾಡೋದನ್ನು ಮರೀಬೇಡಿ. ಆಗ ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯು ಸಿಗುತ್ತದೆ. 5. ಮನೆಯ ವಾತಾವರಣ ಚೆನ್ನಾಗಿರಲಿ ಒರ್ವ ಮನುಷ್ಯ ಮಾನಸಿಕವಾಗಿ ಆರೋಗ್ಯವಾಗಿರಬೇಕೆಂದರೆ ಮನೆಯ ವಾತಾವರಣ ಉತ್ತಮವಾಗಿ ಇರಬೇಕು. ಅದೇ ರೀತಿ ಮನೆಯ ವಾತಾವರಣ ಮಕ್ಕಳ ಆರೋಗ್ಯದ ಮೇಲೆ ಕೂಡ ಅಷ್ಟೇ ಪರಿಣಾಮವನ್ನು ಬೀರುತ್ತದೆ. ಗಂಡ-ಹೆಂಡತಿ ನಿತ್ಯ ಜಗಳ ಆಡೋದ್ರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಮಕ್ಕಳ ಎದುರು ಕೋಪ, ಜಗಳ ಮಾಡದಿರಿ. ಮನೆಯ ವಾತಾವರಣವನ್ನು ಚೆನ್ನಾಗಿ ಇಟ್ಟುಕೊಳ್ಳೋದಕ್ಕೆ ಪ್ರಯತ್ನಿಸಿ. ಮನೆಯವರೆಲ್ಲಾ ಒಟ್ಟಿಗೆ ಊಟ ಮಾಡಿ, ಸಮಯ ಕಳೆಯಿರಿ.

6. ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಿ

ಮಕ್ಕಳ ಜೊತೆಗೆ ಸ್ನೇಹಿತರಂತೆ ಇರೋದು ಎಷ್ಟು ಮುಖ್ಯವೋ, ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಲೋದು ಕೂಡ ಅಷ್ಟೇ ಮುಖ್ಯ. ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಿಗೆ ಸರಿ ಯಾವುದು? ತಪ್ಪು ಯಾವುದು? ಅಂತ ತಿಳಿಯೋದಿಲ್ಲ. ಹೀಗಾಗಿ ಪ್ರೀತಿ, ಪ್ರೇಮೆ, ಕುಡಿತ, ಸಿಗರೇಟ್, ಕೆಟ್ಟ ಸ್ನೇಹಿತರ ಸಹವಾಸಕ್ಕೆ ಬಿದ್ದು ಬಿಡುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳು ದಾರಿ ತಪ್ಪದಂತೆ ಮೂಗು ದಾರ ಹಾಕಿ. ಅಪ್ಪ ಅಥವಾ ಅಮ್ಮ ಇಬ್ಬರಲ್ಲಿ ಒಬ್ಬರ ಭಯ ಮಕ್ಕಳಿಗೆ ಇರುವಂತೆ ನೋಡಿಕೊಳ್ಳಿ.

ಹದಿಹರೆಯದಲ್ಲಿ ಮಕ್ಕಳ ಮನಸ್ಸು ಹೂವಿನ ಹಾಗಿರುತ್ತದೆ. ಹೀಗಾಗಿ ಹೂವಿಗೆ ಒಂಚೂರು ನೋವಾಗದಂತೆ ಕಾಪಾಡಿಕೊಳ್ಳೋದು ಪೋಷಕರ ಕರ್ತವ್ಯ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries