ಕುಂಬಳೆ: ನರೇಂದ್ರಮೋದಿ ನೇತೃತ್ವದ ಸರ್ಕಾರದ ಯಶಸ್ವಿ ಒಂಬತ್ತನೇ ವರ್ಷದ ಸಾಧನೆಯನ್ನು ಸಮಾಜದ ಗಣ್ಯರ ಜೊತೆ ಹಂಚಿಕೊಂಡು ಚರ್ಚೆ ನಡೆಸುವ ಯುವಮೋರ್ಚಾ ಕಾರ್ಯಕ್ರಮದ ಅಂಗವಾಗಿ, ಯುವಮೋರ್ಚಾ ಕುಂಬಳೆ ಮಂಡಲ ಸಮಿತಿ ವತಿಯಿಂದ ಖ್ಯಾತ ಕನ್ನಡ ಚಲನಚಿತ್ರ ನಟ ಪೃಥ್ವಿ ಅಂಬಾರನ್ನು ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಲಾಯಿತು.
ಯುವಮೋರ್ಚಾ ಪ್ರಭಾರಿ, ಬಿಜೆಪಿ ಕುಂಬಳೆ ಮಂಡಲ ಸಮಿತಿ ಕಾರ್ಯದರ್ಶಿ ಧನ್‍ರಾಜ್ ಪ್ರತಾಪನಗರ ಹಾಗೂ ಯುವಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ್ ಅವರು ಕೇಂದ್ರ ಸರ್ಕಾರದ ವಿವಿಧ ಯಶಸ್ವಿ ಯೋಜನೆಗಳನ್ನು ವಿವರಿಸಿ ಚರ್ಚಿಸಿದರು. ಯುವಮೋರ್ಚಾ ಕುಂಬಳೆ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಐಲ್, ಉಪಾಧ್ಯಕ್ಷ ರಾಜೇಶ್ ಕುಂಬಳೆ, ಕಾರ್ಯದರ್ಶಿ ದೇವಿ ಪ್ರಸಾದ್ ಕುಂಬಳೆ ಹಾಗೂ ಮಹೇಶ್ ಪ್ರತಾಪ್ ನಗರ ಮತ್ತು ಯುವಮೋರ್ಚಾ ಕಾರ್ಯಕರ್ತರು ಭಾಗವಹಿಸಿದರು.