ಕಣ್ಣೂರು: ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಭಾಗಿಯಾಗಿರಬಹುದಾದ ಆರೋಪಿಗಳನ್ನು ತಕ್ಷಣ ಬಂಧಿಸಲಾಗುವುದು.
ಪೊಲೀಸರ ವಶದಲ್ಲಿರುವ ಬಂಗಾಳ ಮೂಲದವನೇ ರೈಲಿಗೆ ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ. ನಿಲ್ದಾಣದಲ್ಲಿ ಸುತ್ತಾಡಿಕೊಂಡು ಭಿಕ್ಷೆ ಬೇಡುತ್ತಿದ್ದವನೀತ. ಆದರೆ, ಭದ್ರತಾ ಸಿಬ್ಬಂದಿ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುವುದನ್ನು ತಡೆಹಿಡಿದಿದ್ದರು. ಮೇಲಾಗಿ ಬೆಂಕಿ ಹಚ್ಚಿಕೊಂಡ ದಿನವೇ ಪೆÇಲೀಸರು ಆತನನ್ನು ಠಾಣೆಯಿಂದ ಓಡಿಸಿದ್ದರು. ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಲಾಗಿದೆ ಎಂಬುದು ಆರೋಪಿಯ ಹೇಳಿಕೆ. ಬೆಂಕಿ ಹೊತ್ತಿಸಲು ಇಂಧನ ಬಳಸಿಲ್ಲ. ಸೀಟು ಹರಿದು ಬೆಂಕಿ ಹಚ್ಚಿದ್ದಾನೆ
ಗುರುವಾರ ನಸುಕಿನ 1 ಗಂಟೆ ಸುಮಾರಿಗೆ ಕಣ್ಣೂರು ರೈಲು ನಿಲ್ದಾಣದ ಅಂಗಳದಲ್ಲಿ ನಿಂತಿದ್ದ ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಹಿಂಬದಿಯ ಜನರಲ್ ಬೋಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಇತರ ಬೋಗಿಗಳನ್ನು ಪ್ರತ್ಯೇಕಿಸಿ ಭಾರಿ ಅನಾಹುತ ತಪ್ಪಿಸಲಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‍ನ ಇಂಧನ ಸಂಗ್ರಹಣಾ ಘಟಕವು ಬೆಂಕಿ ಹೊತ್ತಿಕೊಂಡ ಬೋಗಿಯಿಂದ ಮೀಟರ್ ದೂರದಲ್ಲಿತ್ತು. ಇಲ್ಲಿನ ಸಿಸಿಟಿವಿ ಕ್ಯಾಮರಾಗಳಿಂದ ರೈಲಿನ ಬಳಿ ವ್ಯಕ್ತಿ ನಡೆದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಪತ್ತೆಯಾಗಿವೆ.